ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆ | ಬಿಜೆಪಿಗೆ ಮಿತ್ರ ಪಕ್ಷದ ಎಚ್ಚರಿಕೆ!

Prasthutha|

ಗೋರಖ್‌ಪುರ: ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡದಿರುವ ಬಗ್ಗೆ ಉತ್ತರಪ್ರದೇಶ ಸರ್ಕಾರದ ಮಿತ್ರಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ. ಉತ್ತರ ಪ್ರದೇಶದ ಯೋಗಿ ಸರ್ಕಾರದ ಮಿತ್ರ ಪಕ್ಷವಾದ ನಿಷಾದ್ ಪಕ್ಷದ ಮುಖಂಡ ಸಂಜಯ್ ನಿಷಾದ್ ತನ್ನ ಮಗನಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಿಲ್ಲವೆಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ತನ್ನ ಮಗನಾದ ಉತ್ತರಪ್ರದೇಶದ ಸೈಂಟ್ ಅಬೀರ್ ನಗರ ಸಂಸದ ಪ್ರವೀಣ್ ನಿಷಾದ್ ಅವರನ್ನು ಕೇಂದ್ರ ಸಚಿವ ಸಂಪುಟ ಪುನರ್ರಚನೆಯಲ್ಲಿ ಸೇರಿಸಿಕೊಳ್ಳದ ಕಾರಣ ಅವರು ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದ ಅಪ್ನಾ ದಳದ ಅನುಪ್ರಿಯಾ ಪಟೇಲ್ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಹುದಾದರೆ ಪ್ರವೀಣ್ ನಿಷಾದ್ ಅವರನ್ನು ಏಕೆ ಸೇರಿಸಲಾಗಿಲ್ಲ ಎಂಬುದು ಅವರ ಪ್ರಶ್ನೆ.  

“ಅಪ್ನಾ ದಳದ ಅನುಪ್ರಿಯಾ ಪಟೇಲ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿರುವ ಬಿಜೆಪಿಯು ಸಂಸದ ಪ್ರವೀಣ್ ನಿಷಾದ್ ಅವರನ್ನು ಸಂಪುಟಕ್ಕೆ ಏಕೆ ಸೇರಿಸಲಿಲ್ಲ? ನಿಷಾದ್ ಸಮುದಾಯದ ಜನರು ಇದರಿಂದಾಗಿ ಬಿಜೆಪಿಯಿಂದ ದೂರ ಸರಿಯಲಿದ್ದಾರೆ. ಬಿಜೆಪಿ ತನ್ನ ತಪ್ಪನ್ನು ತಿದ್ದದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾದೀತು” ಎಂದು ಸಂಜಯ್ ನಿಷಾದ್ ಎಚ್ಚರಿಸಿದ್ದಾರೆ.



Join Whatsapp