ರಣಬೀರ್ – ಆಲಿಯಾ ಜೋಡಿಯನ್ನು ದೇವಸ್ಥಾನದಲ್ಲಿ ಪೂಜೆ ನಡೆಸದಂತೆ ತಡೆದ ಸಂಘಪರಿವಾರದ ಕಾರ್ಯಕರ್ತರು

Prasthutha|

ಉಜ್ಜಯಿನಿ: ಖ್ಯಾತ ಬಾಲಿವುಡ್ ನಟರಾದ ರಣಬೀರ್ ಕಫೂರ್, ಆಲಿಯಾ ಭಟ್ ಜೋಡಿಯನ್ನು ಐತಿಹಾಸಿಕ ಮಹಾಕಾಳ ದೇವಸ್ಥಾನದಲ್ಲಿ ಪೂಜೆ ನಡೆಸದಂತೆ ಸಂಘಪರಿವಾರದ ಕಾರ್ಯಕರ್ತರು ತಡೆದ ಘಟನೆ ಮಂಗಳವಾರ ತಡರಾತ್ರಿ ವರದಿಯಾಗಿದೆ.

- Advertisement -

ಗೋಮಾಂಸ ಭಕ್ಷಣೆಯ ಕುರಿತು ರಣಬೀರ್, ಆಲಿಯಾ ಭಟ್ ಹಿಂದೆ ಹೇಳಿಕೆಯೊಂದನ್ನು ನೀಡಿದ್ದು, ಅದಕ್ಕಾಗಿ ಬಜರಂಗದಳದ ಕಾರ್ಯಕರ್ತರು ದೇವಸ್ಥಾನಕ್ಕೆ ತೆರಳದಂತೆ ತಡೆದಿದ್ದಾರೆ ಎಂದು ಹೇಳಲಾಗಿದೆ.

ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಜರಂಗದಳದ ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿಚಾರ್ಚ್ ನಡೆಸಲಾಗಿದೆ. ಇದರ ಹೊರತಾಗಿಯೂ ಬಜರಂಗದಳದ ಕಾರ್ಯಕರ್ತರು ಈ ಜೋಡಿಯನ್ನು ದೇವಸ್ಥಾನಕ್ಕೆ ಹೋಗಲು ಅನುಮತಿ ನೀಡಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Join Whatsapp