ತಲಪ್ಪಾಡಿ ಟೋಲ್ ಗೇಟ್- ಸ್ಥಳೀಯ ನಿವಾಸಿಗಳಿಗೆ ಉಚಿತ ಪ್ರಯಾಣ ಸ್ಥಗಿತ: ಪುನರಾರಂಭಕ್ಕೆ SDPI ಆಗ್ರಹ

Prasthutha|

ತಲಪ್ಪಡಿ: ಟೋಲ್ ಗೇಟ್ ನ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೇರಳದ ಜನತೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದನ್ನು ಪುನರಾರಂಭಿಸುವಂತೆ ಎಸ್ ಡಿಪಿಐ ಒತ್ತಾಯಿಸಿದೆ. ಆಸ್ಪತ್ರೆ, ಕೆಲಸ ಮತ್ತಿತರ ಅಗತ್ಯಗಳಿಗಾಗಿ ನಿತ್ಯ ಹಲವಾರು ಬಾರಿ ಟೋಲ್ ಪಾವತಿಸಿ ಸಂಚರಿಸುವ ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ.ಇದಕ್ಕೆ ಪರಿಹಾರವಾಗಿ ವಾಹನ ಸವಾರರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಸದ್ಯ ಹಲವು ವರ್ಷಗಳಿಂದ ಈ ಸೌಲಭ್ಯ ಸ್ಥಗಿತಗೊಂಡಿದೆ.

- Advertisement -

ಈಗ ಆ ಭಾಗದ ನಿವಾಸಿಗಳು ಗಡಿ ದಾಟಲು ಭಾರಿ ಮೊತ್ತದ ಟೋಲ್ ಪಾವತಿಸಬೇಕಾಗಿದೆ.ಎಂಪಿ,ಎಂಎಲ್ಎ ಹಾಗೂ ಇತರೆ ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ಮೌನ ಮುರಿದು ಗಡಿಭಾಗದ ಜನರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದೂ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಟೋಲ್ ಅಧಿಕಾರಿಗಳೊಂದಿಗೆ ಹಣಕಾಸಿನ ವ್ಯವಹಾರ ನಡೆಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದಿತು. ಸ್ಥಳೀಯ ನಿವಾಸಿಗಳ ಸಮಂಜಸವಾದ ಬೇಡಿಕೆಯನ್ನು ಜಾರಿಗೊಳಿಸಲು ಮತ್ತು ಟೋಲ್ ಗೇಟ್ನ ಐದು ಕಿಲೋಮೀಟರ್ ವ್ಯಾಪ್ತಿಯ ಜನರಿಗೆ ಹಳೆಯ ಉಚಿತ ಪ್ರಯಾಣವನ್ನು ಪುನರಾರಂಭಿಸ ಬೇಕೆಂದೂ ತಪ್ಪಿದಲ್ಲಿ ಸಾರ್ವಜನಿಕರನ್ನು ಸೇರಿಸಿ ದೊಡ್ಡ ಮಟ್ಟದ ಹೋರಾಟಗಳೊಂದಿಗೆ ಪಕ್ಷ ಬೀದಿಗಿಳಿಯಬೇಕೆಂದೂ ಕ್ಷೇತ್ರ ಸಮಿತಿ ಸಭೆ ನಿರ್ಧರಿಸಿತು. ಸಮಿತಿ ಅಧ್ಯಕ್ಷ ಅಶ್ರಫ್ ಬಡಾಜೆ ಸಭೆಯ ಅಧ್ಯಕ್ಷತೆ ವಹಿಸಿದ್ದು, ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಹೊಸಂಗಡಿ, ಕ್ಷೇತ್ರ ಕಾರ್ಯದರ್ಶಿ ಶರೀಫ್ ಪಾವೂರು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ, ಆರಿಫ್ ಖಾದರ್, ಜಲೀಲ್ ಸಭೆಯಲ್ಲಿ ಭಾಗವಹಿಸಿದ್ದರು.

Join Whatsapp