12ನೇ ತರಗತಿಯ ಪಠ್ಯ ಪುಸ್ತಕಗಳಿಂದ RSS ನಿಷೇಧ ವಿಚಾರ ಕೈಬಿಟ್ಟ NCERT

Prasthutha|

ಹೊಸದಿಲ್ಲಿ: 12ನೇ ತರಗತಿಯ ಪಠ್ಯ ಪುಸ್ತಕಗಳಿಂದ ಆರೆಸ್ಸೆಸ್ ಅನ್ನು ನಿಷೇಧಿಸಿರುವ ವಿಚಾರವನ್ನು ಕೈಬಿಡಲಾಗಿದೆ.

- Advertisement -

ದೇಶದ ಕೋಮು ಪರಿಸ್ಥಿತಿಯ ಮೇಲೆ ಗಾಂಧೀಜಿ ಸಾವು ಪರಿಣಾಮ ಬೀರಿದೆ. ಗಾಂಧಿಯವರ ಹಿಂದೂ-ಮುಸ್ಲಿಂ ಐಕ್ಯತೆಯ ಅನ್ವೇಷಣೆಯು ಹಿಂದೂ ಉಗ್ರಗಾಮಿಗಳನ್ನು ಪ್ರಚೋದಿಸಿತು. ಆರೆಸ್ಸೆಸ್ ಅನ್ನು ಸ್ವಲ್ಪ ಸಮಯದವರೆಗೆ ನಿಷೇಧಿಸಲಾಯಿತು ಎಂಬ ಪಠ್ಯಗಳು ಹೊಸ ಶೈಕ್ಷಣಿಕ ಅವಧಿಗೆ 12 ನೇ ತರಗತಿಯ ರಾಜಕೀಯ ವಿಜ್ಞಾನ (political science) ಪಠ್ಯಪುಸ್ತಕದಿಂದ ಕೈ ಬಿಡಲಾಗಿದೆ.

ಆದಾಗ್ಯೂ, ಈ ವರ್ಷ ಯಾವುದೇ ಪಠ್ಯಕ್ರಮವನ್ನು ಕಡಿಮೆ ಮಾಡಲಾಗಿಲ್ಲ ಮತ್ತು ಕಳೆದ ವರ್ಷ ಜೂನ್‌ನಲ್ಲಿ ಪಠ್ಯಕ್ರಮವನ್ನು ಸುಧಾರಿಸಲಾಗಿದೆ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಹೇಳಿಕೊಂಡಿದೆ.

- Advertisement -

ಎನ್‌ಸಿಇಆರ್‌ಟಿ ತನ್ನ ವೆಬ್‌ಸೈಟ್‌ನಲ್ಲಿನ ಟಿಪ್ಪಣಿಯಲ್ಲಿ ಕೋವಿಡ್ ಸಾಂಕ್ರಾಮಿಕದ ದೃಷ್ಟಿಯಿಂದ, ವಿದ್ಯಾರ್ಥಿಗಳ ಮೇಲಿನ ವಿಷಯದ ಹೊರೆ ಕಡಿಮೆ ಮಾಡುವುದು ಕಡ್ಡಾಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಸಹ ವಿಷಯದ ಹೊರೆ ಕಡಿಮೆ ಮಾಡಲು ಮತ್ತು ಅನುಭವದ ಕಲಿಕೆಗೆ ಅವಕಾಶಗಳನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ, ಎನ್​​ಸಿಇಆರ್​​ಟಿ ಎಲ್ಲಾ ತರಗತಿಗಳು ಮತ್ತು ಎಲ್ಲಾ ವಿಷಯಗಳ ಪಠ್ಯಪುಸ್ತಕಗಳನ್ನು ಸುಧಾರಿಸುವ ಪ್ರಕ್ರಿಯೆ ಕೈಗೊಂಡಿದೆ ಎಂದು ಹೇಳಿದೆ.



Join Whatsapp