ಭಯೋತ್ಪಾದನೆಯನ್ನು ಯಾವುದೇ ಧರ್ಮದೊಂದಿಗೆ ಜೋಡಿಸಲು ಸಾಧ್ಯವಿಲ್ಲ: ಅಮಿತ್ ಶಾ

Prasthutha|

ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದು ಹೆಚ್ಚು ಅಪಾಯಕಾರಿ. ಭಯೋತ್ಪಾದನೆಯನ್ನು ಯಾವುದೇ ಧರ್ಮ ಅಥವಾ ಗುಂಪಿನೊಂದಿಗೆ ಜೋಡಿಸಬಾರದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ.

- Advertisement -

ಭಯೋತ್ಪಾದಕರು ನಿರಂತರ ಹಿಂಸಾಚಾರ, ಯುವಕರನ್ನು ದಾರಿ ತಪ್ಪಿಸುವುದು ಮತ್ತು ಹಣದ ಮೂಲಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಹಿಡಿಯೋದು ಮಾಡುತ್ತಾರೆ. ಮೂಲಭೂತವಾದ ಹರಡಲು ಮತ್ತು ತಮ್ಮ ಗುರುತನ್ನು ಮರೆಮಾಚಲು ಕರಾಳ ಹಾದಿಯನ್ನು ಉಪಯೋಗಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಭಯೋತ್ಪಾದನೆಯು ನಿಸ್ಸಂದೇಹವಾಗಿ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಯಾಗಿದೆ. ಆದರೆ ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿ ಎಂದು ನಾನು ನಂಬುತ್ತೇನೆ. ಏಕೆಂದರೆ ಭಯೋತ್ಪಾದನೆಯ ‘ಮಾದರಿಗಳು ಮತ್ತು ವಿಧಾನಗಳು’ ಅಂತಹ ನಿಧಿಯಿಂದ ಪೋಷಿಸಲ್ಪಡುತ್ತವೆ ಎಂದು ಅಮಿತ್ ಶಾ ತಿಳಿಸಿದರು.

- Advertisement -

ಅಲ್ಲದೆ, ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದು ವಿಶ್ವ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.



Join Whatsapp