ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ಹಲ್ಲೆ ಎಂಬ ಭಯಾನಕ ವೀಡಿಯೋ ವೈರಲ್ : ವಾಸ್ತವವೇನು ?

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕೊಲೆಯ ವೀಡಿಯೋವೊಂದನ್ನು ತ್ರಿಪುರಾದಲ್ಲಿ ಮುಸ್ಲಿಮ್ ಸಮುದಾಯದ ಮೇಲಿನ ಹಿಂಸಾಚಾರದ ವೀಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ವಿಡಿಯೋದಲ್ಲಿ ಕೆಲವರು ಹರಿತವಾದ ಆಯುಧದಿಂದ ವ್ಯಕ್ತಿಯ ಮೇಲೆ ದಾಳಿ ನಡೆಸುತ್ತಿರುವುದು ಕಾಣಬಹುದು. ಇದು ಟ್ವಿಟ್ಟರ್ ನಲ್ಲಿ ಹಲವರು ಶೇರ್ ಮಾಡಿದ್ದು, ಪರ ವಿರೋಧ ಚರ್ಚೆಗಳು ನಡೆದಿತ್ತು.

- Advertisement -


ಆದರೆ ಇದೀಗ ವೀಡಿಯೋದ ಸತ್ಯಾಂಶ ಬಯಲಾಗಿದೆ. 2021ರ ಏಪ್ರಿಲ್ 20ರ ರಾತ್ರಿ ಬೆಂಗಳೂರಿನಲ್ಲಿ ರವಿ ವರ್ಮಾ ಆಲಿಯಾಸ್ ಅಪ್ಪು ಎಂಬ ಯುವಕನನ್ನು ದಿನೇಶ್ ಮತ್ತು ಇತರರು ಹತ್ಯೆಗೈಯುತ್ತಿರುವ ವೀಡಿಯೋ ಇದಾಗಿದೆ. ಅಶೋಕ್ ನಗರದ ಫಜಿಮಾ ಬೀದಿಯಲ್ಲಿರುವ ಅಂಗಡಿಗೆ ಹೋಗಿದ್ದ ಅಪ್ಪುವಿನ ಮೇಲೆ ಸುಮಾರು 55 ಜನರು ಹಲ್ಲೆ ಮಾಡಿ ಹತ್ಯೆ ಮಾಡಿದ್ದರು.


ಒಟ್ಟಾರೆಯಾಗಿ, ಏಪ್ರಿಲ್ 2021 ರಲ್ಲಿ ಬೆಂಗಳೂರಿನಲ್ಲಿ ಆರೋಪಿಯೋರ್ವನ ಹತ್ಯೆಯ ವೀಡಿಯೋವನ್ನು ಇತ್ತೀಚೆಗೆ ತ್ರಿಪುರಾದಲ್ಲಿ ಮುಸ್ಲಿಂ ಸಮುದಾಯದ ಮೇಲಿನ ಹಿಂಸಾಚಾರ ಎಂದು ಪ್ರಚಾರ ನಡೆಸಲಾಗಿತ್ತು. ಅದರ ಸತ್ಯಾಸತ್ಯತೆಯನ್ನು ಜಾಲತಾಣದ ಫ್ಯಾಕ್ಟ್ ಚೆಕ್ ಸುದ್ದಿ ತಾಣವಾಗಿರುವ ‘ಆಲ್ಟ್ ನ್ಯೂಸ್’ ಬಹಿರಂಗಗೊಳಿಸಿದೆ.

Join Whatsapp