ಬಿಹಾರದಲ್ಲಿ NDA ಸರಕಾರ ಪತನಕ್ಕೆ ಕ್ಷಣಗಣನೆ? : RJD ಸಂಪರ್ಕದಲ್ಲಿ 17 JDU ಶಾಸಕರು!

Prasthutha|

ಪಾಟ್ನಾ : ಅರುಣಾಚಲ ಪ್ರದೇಶದಲ್ಲಿ ಆರು ಮಂದಿ ಶಾಸಕರಲ್ಲಿ ಐವರು ಶಾಸಕರು ಬಿಜೆಪಿಗೆ ಸೇರಿದ ಬೆನ್ನಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಮತ್ತೊಂದು ದೊಡ್ಡ ಆಘಾತ ಎದುರಾಗುವ ಲಕ್ಷಣ ಕಂಡುಬರುತ್ತಿದೆ.

- Advertisement -

ಬಿಹಾರದ ಆಡಳಿತಾರೂಢ ಜೆಡಿಯುನ 17 ಶಾಸಕರು ಆರ್ ಜೆಡಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಆರ್ ಜೆಡಿ ಹಿರಿಯ ಮುಖಂಡ ಶ್ಯಾಮ್ ರಜಕ್ ಹೇಳಿದ್ದಾರೆ. ಹೀಗಾಗಿ, ಜೆಡಿಯು ನೇತೃತ್ವದ ಬಿಜೆಪಿ ಮೈತ್ರಿಕೂಟದ ಸರಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಎನ್ನಲಾಗುತ್ತಿದೆ.

ಜೆಡಿಯು ಪಕ್ಷದಲ್ಲಿ ನಿತೀಶ್ ಕುಮಾರ್ ಅವರ ನಿರಂಕುಶಾಧಿಕಾರಿ ವರ್ತನೆಯಿಂದ ಬಹುಪಾಲು ಶಾಸಕರು ಕಿರಿಕಿರಿ ಅನುಭವಿಸುತ್ತಿದ್ದು, ರಾಜಕೀಯ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ. ಅವರೆಲ್ಲಾ ಆರ್ ಜೆಡಿ ಸಂಪರ್ಕದಲ್ಲಿದ್ದಾರೆ ಎಂದು ಕಳೆದ ರಜಕ್ ತಿಳಿಸಿದ್ದಾರೆ. ಶ್ಯಾಮ್ ರಜಕ್ ಈ ಹಿಂದಿನ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಕೈಗಾರಿಕೆ ಸಚಿವರಾಗಿದ್ದವರು.

- Advertisement -

ಬಿಹಾರದಲ್ಲಿ ಎನ್ ಡಿಎ ಸರಕಾರ ಶೀಘ್ರದಲ್ಲೇ ಪತನಗೊಳ್ಳಲಿದೆ. ಅರುಣಾಚಲ ಪ್ರದೇಶದಲ್ಲಿ ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಯಾದ ನಂತರ ಮಿತ್ರಪಕ್ಷಗಳ ನಡುವೆ ಅಸಮಾಧಾನ ಉಂಟಾಗಿದೆ. ಜೆಡಿಯುನ 17 ಶಾಸಕರನ್ನು ಒಟ್ಟಿಗೆ ಇಟ್ಟುಕೊಳ್ಳುವಲ್ಲಿ ನಿತೀಶ್ ಕುಮಾರ್ ವಿಫಲರಾಗಿದ್ದಾರೆ ಎಂದು ರಜಕ್ ಹೇಳಿದ್ದಾರೆ.



Join Whatsapp