ದೇವಸ್ಥಾನಗಳ ಟೆಂಡರ್: ಚಪ್ಪಲಿ ಕಾಯುವ ಕೆಲಸಕ್ಕೆ ಪರಿಶಿಷ್ಟರು!

Prasthutha|

ಬೆಂಗಳೂರು : ಬಸವನಗುಡಿಯ ದೊಡ್ಡ ಗಣಪತಿ ಮತ್ತು ಸಮೂಹ ದೇವಸ್ಥಾನಗಳಲ್ಲಿನ ವಿವಿಧ ಕಾರ್ಯಗಳ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗಿದ್ದು, ಚಪ್ಪಲಿ ಕಾಯುವ ಕೆಲಸವನ್ನು ಪರಿಶಿಷ್ಟ ವರ್ಗದವರಿಗೆ ನೀಡಲಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳು ಟೆಂಡರ್ ಕಂ ಬಹಿರಂಗ ಹರಾಜು ಕರೆದಿದ್ದು, ಮೀಸಲಾತಿ ಆಧಾರಿತವಾಗಿ ಈ ಟೆಂಡರ್ ಕರೆಯಲಾಗಿದೆ. ದೇವಾಲಯಕ್ಕೆ ಬರುವ ಭಕ್ತಾದಿಗಳ ಪೂಜಾ ಕೈಂಕರ್ಯಗಳಿಗೆ ಅನುಕೂಲಕ್ಕಾಗಿ ಪೂಜಾ ಸಾಮಾಗ್ರಿ ಮಾರಾಟ ಮಾಡುವ ಸ್ಥಳದ ಹಕ್ಕು, ಈಡುಗಾಯಿ ಆಯ್ದುಕೊಳ್ಳುವ ಸ್ಥಳದ ಹಕ್ಕು, ಎಳನೀರು ಮಾರಾಟ, ಖಾಲಿ ಜಾಗದಲ್ಲಿ ಮೆರಿಗೋ ರೌಂಡ್ ಮತ್ತು ಸುಂಕ ವಸೂಲಾತಿ ಹಕ್ಕುಗಳನ್ನು ಸಾಮಾನ್ಯ ವರ್ಗದವರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ವರ್ಗದವರಿಗೆ ಚಪ್ಪಲಿ ಕಾಯುವ ಕೆಲಸವನ್ನು ಮೀಸಲಿಡಲಾಗಿದೆ.

ದೇವಸ್ಥಾನಗಳಲ್ಲಿನ ವಿವಿಧ ಕಾರ್ಯಗಳ ನಿರ್ವಹಣೆಗಾಗಿ ಜಾತಿ ಆಧಾರಿತ ಲೆಕ್ಕಾಚಾರದಲ್ಲಿ ಟೆಂಡರ್ ಪ್ರಕ್ರಿಯೆ ಕರೆದದ್ದೇ ತಪ್ಪು ಮತ್ತು ಚಪ್ಪಲಿ ಕಾಯುವ ಕೆಲಸವನ್ನು ಪರಿಶಿಷ್ಟ ವರ್ಗದವರಿಗೆ ನೀಡಿದ್ದು ಮತ್ತೂ ತಪ್ಪು ಎಂದು ಜನಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿವೆ.

- Advertisement -

ಜಾತಿ ಆಧಾರಿತ ಲೆಕ್ಕದಲ್ಲಿ ಟೆಂಡರ್ ಕರೆದಿರುವುದು ಅಮಾನವೀಯ, ದಲಿತರೆಂದರೆ ಚಪ್ಪಲಿ ಕಾಯುವವರು ಎಂದು ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಈ ಟೆಂಡರ್ ರದ್ದು ಪಡಿಸಬೇಕು ಎಂದು ಡಿಎಚ್ಎಸ್ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಒತ್ತಾಯಿಸಿದ್ದಾರೆ.

Join Whatsapp