ವಯನಾಡು: ವಯನಾಡು ದುರಂತದಿಂದ ಸಂತ್ರಸ್ತರಾಗಿರುವ 778 ಕುಟುಂಬಗಳಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಪರಿಹಾರ ಶಿಬಿರಗಳಲ್ಲಿ ಇದ್ದ ಈ ಎಲ್ಲ ಕುಟುಂಬಗಳನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದೆ. ಒಟ್ಟು 2,569 ಮಂದಿಯನ್ನು ಸರ್ಕಾರಿ ಮನೆ ಮತ್ತು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಪುನರ್ವಸತಿಗೊಂಡಿರುವ ಕುಟುಂಬಗಳಿಗೆ ‘ಬ್ಯಾಕ್ ಟು ಹೋಮ್’ ಕಿಟ್ ನೀಡುವ ಕಾರ್ಯ ಆರಂಭಿಸಲಾಗಿದೆ. ಇದರಲ್ಲಿ ಪೀಠೋಪಕರಣಗಳು, ಕಿಚನ್ ಕಿಟ್, ಆಹಾರ ಸಾಮಗ್ರಿ ಕಿಟ್, ನೈರ್ಮಲ್ಯ ಕಿಟ್ ಒಳಗೊಂಡಿರಲಿವೆ ಎಂದು ಸರ್ಕಾರ ಪ್ರಕಣೆಯಲ್ಲಿ ತಿಳಿಸಿದೆ.
ವಯನಾಡ್‌ನಲ್ಲಿ ಜುಲೈ 30ಕ್ಕೆ ಸಂಭವಿಸಿದ್ದ ಭೂಕುಸಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಮಗ್ರ ಮನವಿಯನ್ನು ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.