ಬಂಟ್ವಾಳ| ಟೆಂಪೋ- ಬೈಕ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Prasthutha|

ಬಂಟ್ವಾಳ:  ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಯಿಲ ಪೇಟೆ ಸಮೀಪದ ಕುದ್ಮಾಣಿ ಕಿರು ಸೇತುವೆ ಮೇಲೆ ನಡೆದಿದೆ.

- Advertisement -

ಮೃತ ವ್ಯಕ್ತಿಯನ್ನು ತೆಂಕ ಮಿಜಾರು ನಿವಾಸಿ ದಿನೇಶ ಸೇಮಿತ(23) ಎಂದು ಗುರುತಿಸಲಾಗಿದೆ. ಮೂಡುಬಿದ್ರೆ ಕಡೆಯಿಂದ ಬಂಟ್ವಾಳ ಕಡೆಗೆ ಹೋಗುತ್ತಿದ್ದ ದಿನೇಶ ಅವರಿಗೆ ಬಿ.ಸಿ.ರೋಡಿನಿಂದ ಮೂಡುಬಿದ್ರೆ ಗೆ ಹೋಗುತ್ತಿದ್ದ ಬೀಡಿ ಸಂಸ್ಥೆಯೊಂದರ ಗೂಡ್ಸ್ ಟೆಂಪೋ ಡಿಕ್ಕಿಯಾಗಿದೆ. ರಸ್ತೆಗೆ ತಲೆ ಬಡಿದು ತೀವ್ರ ರಕ್ತಸ್ರಾವದಿಂದ ದಿನೇಶ್ ಅವರು  ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ  ಮೆಲ್ಕಾರ್ ಸಂಚಾರಿ ಠಾಣೆ ಪೊಲೀಸರು ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp