ಮಂಗಳೂರು : ಬೈಕಂಪಾಡಿ ದೇವಸ್ಥಾನದ ಮೂರ್ತಿ ಧ್ವಂಸ: ಆರೋಪಿ ರೋಹಿತಾಶ್ವ ಬಂಧನ

Prasthutha|

►ಪ್ರತಿಭಟನೆ, ಪ್ರಚೋದನಾಕಾರಿ ಹೇಳಿಕೆ ನೀಡಿ ಗಲಭೆಗೆ ಯತ್ನಿಸಿದ್ದ ಸಂಘಪರಿವಾರ !

- Advertisement -

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ  ಕರ್ಕೇರ ಮೂಲ ದೈವಸ್ಥಾನದಲ್ಲಿ ಮೂರ್ತಿಗಳನ್ನು ಭಗ್ನಗೊಳಿಸಿ , ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ರೋಹಿತಾಶ್ವನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.  ಆರೋಪಿ ಹಲವಾರು ವರ್ಷಗಳಿಂದ ಬೈಕಂಪಾಡಿ ಪ್ರದೇಶದಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದು, ಅಕ್ಟೋಬರ್ 16ರ ರಾತ್ರಿ  ದೇವಸ್ಥಾನದಲ್ಲಿನ ಚಿನ್ನ, ಬೆಳ್ಳಿ ಆಭರಣ ಕಳವು ಮಾಡಲು ಪ್ರಯತ್ನಿಸಿದ್ದು, ಅಲ್ಲಿ ತನಗೆ ಬೇಕಾದುದು ಸಿಗದೇ ಇದ್ದಾಗ ದೈವಸ್ಥಾನದ ಈಶ್ವರ ಹಾಗೂ ನಾಗದೈವ ವಿಗ್ರಹಗಳನ್ನು ಧ್ವಂಸ ಮಾಡಿದ್ದಾನೆ ಎನ್ನಲಾಗಿದೆ.

ಸಂಘಪರಿವಾರದಿಂದ ಶಾಂತಿ ಕದಡುವ ಪ್ರಯತ್ನ

- Advertisement -

ಘಟನೆ ನಡೆದ ಬೆನ್ನಲ್ಲೇ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.  ಇದೇ ವೇಳೆ ಮೂರ್ತಿ ಭಗ್ನಗೊಳಿಸಿದ ಘಟನೆಯನ್ನು ಮುಂದಿಟ್ಟುಕೊಂಡು ಸಂಘಪರಿವಾರ ಎಂದಿನಂತೆ ಪ್ರತಿಭಟನೆ, ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಪರಿಸರದ ಶಾಂತಿ ಕದಡುವ ಪ್ರಯತ್ನಕ್ಕೆ ಕೈಹಾಕಿತ್ತು.

ಆರೋಪಿಯ ಬಂಧನ ಸಂಶಯಾಸ್ಪದವೆಂದ ಸಾರ್ವಜನಿಕರು

ಈ ನಡುವೆ ಬಂಧಿತ ರೋಹಿತಾಶ್ವ ಕಳೆದ ಹಲವಾರು ವರ್ಷಗಳಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಲಮಿನಾ ಕಂಪನಿಯ ಬಳಿ ಇರುತ್ತಿದ್ದು, ಆತ ಅನಾರೋಗ್ಯಪೀಡಿತನಾಗಿದ್ದ.   ಈತ ಘಟನೆಯ ನೈಜ ಆರೋಪಿಯಾಗಿರುವ ಸಾಧ್ಯತೆ ಇಲ್ಲ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.  ಘಟನೆಯ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕಾಗಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.



Join Whatsapp