ದಲಿತರಿಗೆ ಪ್ರವೇಶ ನಿರಾಕರಣೆ : ದೇವಸ್ಥಾನಕ್ಕೆ ಬೀಗ ಜಡಿದ ತಹಶಿಲ್ದಾರ್

Prasthutha|

ವಿಲ್ಲುಪುರಂ: ವೈಕಾಸಿ ಹಬ್ಬದ ವೇಳೆ ದಲಿತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದೆ ತಾರತಮ್ಯ ಎಸಲಾಗಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನಲೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವೀರನಂಪಟ್ಟಿಯ ಕಾಳಿಯಮ್ಮನ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

- Advertisement -

ಕಾಳಿಯಮ್ಮನ್ ದೇವಾಲಯವು ಈ ಭಾಗದಲ್ಲಿ ಪ್ರಸಿದ್ದಿಯಾಗಿದ್ದು, ಈ ವರ್ಷ ವೈಕಾಸಿ ಹಬ್ಬದ ಪ್ರಯುಕ್ತ ಸುತ್ತಲಿನ ಎಂಟು ಗ್ರಾಮಗಳ ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಈ ಭಾಗದಲ್ಲಿ 80 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದ್ದು, ಈ ಪೈಕಿ ಕೆಲವು ಕುಟುಂಬಗಳು ದೇವಸ್ಥಾನದಲ್ಲಿ ನಮಗೆ ನಿರಂತರವಾಗಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಮತ್ತು ವೈಕಾಶಿ ಉತ್ಸವದಲ್ಲಿ ಭಾಗವಹಿಸಲು ಸಹ ಅನುಮತಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿವೆ. ತಾರತಮ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

- Advertisement -

ಪ್ರತಿಭಟನೆ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಕಡವೂರು ತಹಶಿಲ್ದಾರ್ ಮುನಿರಾಜ್ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿದರು. ಸೌಹಾರ್ದಯುತ ಮಾತುಕತೆಗೆ ಒಪ್ಪದ ಹಿನ್ನೆಲೆ ಪರಿಹಾರ ಸಿಗುವವರೆಗೆ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಘೋಷಿಸಲಾಗಿದೆ.

ಕಳೆದ ಎಪ್ರಿಲ್‌ನಿಂದ ಪ್ರಬಲ ಜಾತಿ ಮತ್ತು ದಲಿತರ ನಡುವೆ ಜಗಳ‌ ಹೆಚ್ಚುತ್ತಿದ್ದು, ತಮ್ಮ‌ ಮೇಲೆ ಶೋಷಣೆಯಾಗುತ್ತಿದೆ ಎಂದು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಆರೋಪಿಸುತ್ತಿವೆ.

Join Whatsapp