ರಾಯಚೂರಿನಲ್ಲಿ 43 ಡಿಗ್ರಿ ಸೆಲ್ಸಿಯಸ್‌ ದಾಟಿದ ತಾಪಮಾನ!

Prasthutha|

ಬೆಂಗಳೂರು: ರಾಜ್ಯದಾದ್ಯಂತ ಬಿಸಿಲಿನ ವಾತಾವರಣ ಮುಂದುವರಿದಿದ್ದು ಸೋಮವಾರ ರಾಯಚೂರಿನಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಅಲ್ಲದೆ, 8 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ.

- Advertisement -

ಕಲಬುರಗಿ (42.9), ಬಾಗಲಕೋಟೆ (42.3), ಕೊಪ್ಪಳ (42), ವಿಜಯಪುರ (41.2), ಗದಗ (40.2), ಚಾಮರಾಜನಗರ (40.1), ದಾವಣಗೆರೆ (40) ಡಿಗ್ರಿ ಸೆಲ್ಸಿಯಸ್‌ ಸೋಮವಾರ ಕಂಡುಬಂದಿದೆ.

ಬೆಂಗಳೂರು ನಗರದಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಎಚ್‌ಎಎಲ್‌ನಲ್ಲಿ 37.6, ಬೆಂಗಳೂರು ನಗರದಲ್ಲಿ 38.5, ಕೆಐಎಎಲ್‌ನಲ್ಲಿ 38.2, ಜಿಕೆವಿಕೆಯಲ್ಲಿ 37 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

- Advertisement -

ಮುಂದಿನ 48 ಗಂಟೆ ಒಣ ಹವೆ ಮುಂದುವರಿಯಲಿದ್ದು, ಉಷ್ಣಾಂಶ 1ರಿಂದ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸೋಮವಾರ ಬಿಸಿಲಿನ ತಾಪಕ್ಕೆ ವೃದ್ಧೆಯೋರ್ವರು ಸಾವನ್ನಪಿದ್ದು, ಜನರು ಸಾಕಷ್ಟು ನೀರು ಕುಡಿಯುತ್ತ, ನಿರ್ಜಲೀಕರಣ ಆಗದಂತೆ ಕಾಪಾಡಿಕೊಳ್ಳುತ್ತಾ ಬಿಸಿಲಿಗೆ ಹೆಚ್ಚು ಹೊತ್ತು ಮೈ ಒಡ್ಡದಂತೆ ನೋಡಿಕೊಳ್ಳಬೇಕೆಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ನೇರವಾಗಿ ಸೂರ್ಯನ ಶಾಖಕ್ಕೆ ಹೋಗುವುದನ್ನು ತಪ್ಪಿಸಬೇಕು. ಹಗುರ, ಸಡಿಲ, ತಿಳಿಯಾದ ಬಣ್ಣದ ಹತ್ತಿಯ ಬಟ್ಟೆ ಧರಿಸಬೇಕು. ಬಿಸಿಲಿಗೆ ಹೋಗುವಾಗ ಬಟ್ಟೆ, ಟೊಪ್ಪಿ ಅಥವಾ ಛತ್ರಿಯಿಂದ ತಲೆ ಮುಚ್ಚಿಕೊಳ್ಳಬೇಕು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.



Join Whatsapp