ತೆಲಂಗಾಣ ಚುನಾವಣೆ: 700 ಕೋಟಿ ಮೌಲ್ಯದ ನಗದು ಸೇರಿ ಇತರ ವಸ್ತು ವಶ

Prasthutha|

- Advertisement -

ಹೈದರಾಬಾದ್: ಅಕ್ಟೋಬರ್ 9 ರಂದು ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ತೆಲಂಗಾಣ ರಾಜ್ಯದಲ್ಲಿ ಚುನಾವಣಾ ಸಂಬಂಧಿತ ವಶಪಡಿಸಿಕೊಂಡ ಪ್ರಕರಣಗಳಲ್ಲಿ ಕನಿಷ್ಠ 700 ಕೋಟಿ ರೂಪಾಯಿ ಮೌಲ್ಯದ ನಗದು, ಮದ್ಯ, ಚಿನ್ನ ಮತ್ತು ಇತರ ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ನವೆಂಬರ್ 25ರಂದೇ ಜಾರಿ ಸಂಸ್ಥೆಗಳು ಸುಮಾರು 10 ಕೋಟಿ ರೂ ವಶ ಪಡಿಸಿಕೊಂಡಿವೆ. ಅಕ್ಟೋಬರ್ 9 ಮತ್ತು ನವೆಂಬರ್ 25 ರ ನಡುವೆ ಲೆಕ್ಕಕ್ಕೆ ಸಿಗದ ನಗದು 282.75 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಶನಿವಾರ 39 ಕೋಟಿ ರೂಪಾಯಿ ಮೌಲ್ಯದ 5,117 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ತಿಂಗಳಲ್ಲಿ ವಶಪಡಿಸಿಕೊಂಡ ಒಟ್ಟು ಮದ್ಯದ ಮೌಲ್ಯ 117 ಕೋಟಿ ರೂ. ಶನಿವಾರ 1.60 ಕೋಟಿ ಮೌಲ್ಯದ 639.5 ಕೆಜಿ ಗಾಂಜಾ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Join Whatsapp