ಇಂಟರ್ನೆಟ್ ಕಾಲಿಂಗ್ ಆಪ್ ಗಳಿಗೆ ಟೆಲಿಕಾಂ ಲೈಸೆನ್ಸ್

Prasthutha|

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಇಂಟರ್ನೆಟ್ ಕಲೆಗಳಾದ ವಾಟ್ಸಾಪ್, ಝೂಮ್, ಸ್ಕೈಪ್,ಗೂಗಲ್ ಡ್ಯೂ ಮುಂತಾದ ಸಂದೇಶ ಕಳುಹಿಸುವ ಹಾಗೂ ಕರೆಮಾಡಲೂ ಸಾಧ್ಯವಿರುವ ಆಪ್ ಗಳು ಇನ್ನು ಮುಂದೆ ಟೆಲಿಕಾಂ ಲೈಸೆನ್ಸ್ ಪಡೆಯಬೇಕೆಂಬ ಕಡ್ಡಾಯ ಕಾನೂನು ಜಾರಿಗೆ ತರುವ ಬಗ್ಗೆ ಟೆಲಿಕಮ್ಯುನಿಕೇಷನ್ 2022 ಬಿಲ್ ಡ್ರಾಫ್ಟ್ ಮಾಡಲಾಗಿದೆ. ಓಟಿಟಿ ಆಪ್ ಗಳೂ ಈ ಕಾನೂನಿನಡಿಯಲ್ಲಿ ಸೇರಲಿದೆ.

- Advertisement -

ದೂರಸಂಪರ್ಕ ಸೇವೆ ಹಾಗೂ ದೂರಸಂಪರ್ಕ ನೆಟ್ವರ್ಕ್ ಗಳ ಬಳಕೆ ಮಾಡಲು ಈ ಬಿಲ್ ಬಿಡುಗಡೆಗೊಳಿಸಲಾಗಿದೆ ಎಂಬ ಮಾಹಿತಿ ದೊರಕಿದೆ.

ಟೆಲಿಕಾಂ ಹಾಗೂ ಇಂಟರ್ನೆಟ್ ಸೇವೆ ಒದಗಿಸುತ್ತಿರುವವರ ಬಿಲ್ ಮನ್ನಾ ಮಾಡುವ ಬಗ್ಗೆ‌ ಹಾಗೂ ಈ ಸೇವೆ ಸ್ಥಗಿತಗೊಳಿಸಲು ಇಚ್ಛಿಸುವವರಿಗೆ ಲೈಸೆನ್ಸ್ ರದ್ದತಿಯ ವೇಳೆ ಅವರು ಫೀಸ್ ಹಿಂದುರುಗಿಸುವ ಬಗ್ಗೆಯೂ ಮಾಹಿತಿ ಇದೆ. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಕ್ಕೆ ಅಕ್ಟೋಬರ್ 20 ಕೊನೆಯ ದಿನವಾಗಿದೆ.

- Advertisement -

ಈ ಡ್ರಾಫ್ಟಿನ ಪ್ರಕಾರ ಕೇಂದ್ರ ಸರ್ಕಾರವು ದೂರಸಂಪರ್ಕ ನಿಯಮದ ಪ್ರಕಾರ , ಲೈಸೆನ್ಸ್ ರದ್ದತಿಯ ಸಮಯ ಸರಕಾರವು ಸೇವಾ ಸಂಸ್ಥೆಗಳ ಪ್ರವೇಶ ಶುಲ್ಕ, ಲೈಸೆನ್ಸ್ ಶುಲ್ಕ, ರಿಜಿಸ್ಟ್ರೇಷನ್ ಶುಲ್ಕ ಹಾಗೂ ಇನ್ನಿತರ ಶುಲ್ಕಗಳು ಹಾಗೂ ಇವುಗಳ ಮೇಲಿನ ಬಡ್ಡಿಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮನ್ನಾ ಮಾಡುವ ಅವಕಾಶ ಹೊಂದಿದೆ.



Join Whatsapp