ತೆಲಂಗಾಣ ನೂತನ ರಾಜ್ಯ ಗೀತೆ ಜೂನ್ 2ರಂದು ಬಿಡುಗಡೆ

Prasthutha|

ಹೈದರಾಬಾದ್‌: ಖ್ಯಾತ ಕವಿ ಅಂದೇ ಶ್ರೀ ಬರೆದಿರುವ ‘ಜಯ ಜಯ ಹೇ ತೆಲಂಗಾಣ’ ಹಾಡನ್ನು ತೆಲಂಗಾಣ ರಾಜ್ಯ ಗೀತೆಯಾಗಿ ಸರ್ಕಾರ ಅನುಮೋದಿಸಿದೆ.

- Advertisement -

ಜೂನ್ 2 ರಂದು ರಾಜ್ಯ ರಚನೆಯ ದಿನದ ಅದ್ಧೂರಿ ಆಚರಣೆಯಲ್ಲಿ ರಾಜ್ಯ ಗೀತೆ ಬಿಡುಗಡೆಯಾಗಲಿದೆ ಎಂದು ರಾತ್ರಿ ಹೊರಡಿಸಲಾದ ಅಧಿಕೃತ ಪ್ರಕಟಣೆಯಲ್ಲಿ ಸರಕಾರ ತಿಳಿಸಿದೆ.

ಅಂದೇ ಶ್ರೀ ಅವರು 20 ವರ್ಷಗಳ ಹಿಂದೆ ಬರೆದ ಗೀತೆಯನ್ನು ಯಾವುದೇ ಬದಲಾವಣೆಗಳಿಲ್ಲದೆ ರಾಜ್ಯಗೀತೆಯಾಗಿ ಸ್ವೀಕರಿಸಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಈ ಹಾಡಿಗೆ ಸಂಗೀತ ಸಂಯೋಜಿಸಿ ಹಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

- Advertisement -

ರಾಜ್ಯ ಗೀತೆಯನ್ನು ಎರಡು ಆವೃತ್ತಿಗಳಲ್ಲಿ ನಿರ್ಮಿಸಲಾಗಿದೆ. ಹಾಡಿನ ಮೊದಲ ಆವೃತ್ತಿಯು ಎರಡೂವರೆ ನಿಮಿಷಗಳವರೆಗೆ ಇರುತ್ತದೆ, ಎರಡನೇ ಆವೃತ್ತಿಯು ಪೂರ್ಣ ಹದಿಮೂರುವರೆ ನಿಮಿಷಗಳ ನಿರೂಪಣೆಯಾಗಿದೆ. ಮೂರು ಚರಣಗಳನ್ನು ಹೊಂದಿರುವ ಚಿಕ್ಕ ಆವೃತ್ತಿಯನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ಲೇ ಮಾಡಲಾಗುವುದು. ಎರಡೂ ಆವೃತ್ತಿಗಳನ್ನು ರಾಜ್ಯ ಗೀತೆಗಳಾಗಿ ಪರಿಗಣಿಸಲಾಗುವುದು ಎಂದು ಸಿಎಂ ರೆಡ್ಡಿ ಹೇಳಿದ್ದಾರೆ.

ರಾಜ್ಯ ಲಾಂಛನದಿಂದ ಚಾರ್ಮಿನಾರ್ ಮತ್ತು ಕಾಕತೀಯ ರಾಜವಂಶದ ಕಮಾನುಗಳನ್ನು ತೆಗೆದುಹಾಕುವ ಸರ್ಕಾರದ ಕ್ರಮಕ್ಕೆ ಬಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರವು ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ.



Join Whatsapp