ಹೈದರಾಬಾದ್: ತೆಲಂಗಾಣ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಫೋಟಿಸಿದೆ. ಟಿಕೆಟ್ ನಿರಾಕರಿಸಲ್ಪಟ್ಟ ಅಭ್ಯರ್ಥಿಗಳು ಕಾಂಗ್ರೆಸ್ ತೊರೆದು ಸಾಮೂಹಿಕವಾಗಿ ಬಿಆರ್‌ಎಸ್ ಕದ ತಟ್ಟುತ್ತಿರುವ ಬೆಳವಣಿಗೆ ನಡೆಯುತ್ತಿದೆ.
ಮೂರನೇ ಬಾರಿಗೆ ರಾಜ್ಯದಲ್ಲಿ ಗದ್ದುಗೆಗೇರುವ ನಿಟ್ಟಿನ ಪ್ರಯತ್ನ ನಡೆಸಿರುವ ಬಿಆರ್‌ಎಸ್ ಈ ಬೆಳವಣಿಗೆಯ ಫಾಯಿದ ತೆಗೆಯಲು ಉತ್ಸುಕವಾಗಿದ್ದು, ಟಿಕೆಟ್ ವಂಚಿತ ಕಾಂಗ್ರೆಸ್ ಮುಖಂಡರನ್ನು ಅತ್ಯಂತ ಉತ್ಸಾಹದಿಂದ ತನ್ನತ್ತ ಸೆಳೆಯುತ್ತಿದೆ.
ಅಕ್ಟೋಬರ್ 27ರಂದು 45 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಮಾಜಿ ಸಚಿವ ನಾಗಮ್ ಜನಾರ್ದನ್ ರೆಡ್ಡಿ, ಮಾಜಿ ಶಾಸಕರಾದ ಎರ್ರಾ ಶೇಖರ್, ಪಿ. ವಿಷ್ಣುವರ್ಧನ್ ರೆಡ್ಡಿ ಸೇರಿ ಹಲವರಿಗೆ ಟಿಕೆಟ್ ನಿರಾಕರಿಸಲಾಗಿತ್ತು.