ಅತ್ಯಾಚಾರ ಆರೋಪಿಯ ಸಾವು| ನ್ಯಾಯಾಂಗ ತನಿಖೆಗೆ ಆದೇಶಿಸಿದ ತೆಲಂಗಾಣ ಹೈಕೋರ್ಟ್

Prasthutha|

ಆರು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಂದು ಹಾಕಿದ್ದ ಪಲ್ಲಕೊಂಡ ರಾಜು

ಹೈದರಾಬಾದ್: ತೆಲಂಗಾಣದ ಹೈದರಾಬಾದ್ ನಲ್ಲಿ ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪಿ ಪಲ್ಲಕೊಂಡ ರಾಜು ಸಾವಿನ ಕುರಿತು ತೆಲಂಗಾಣ ಹೈಕೋರ್ಟ್ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

- Advertisement -

ವಾರಂಗಲ್ ಜಿಲ್ಲೆಯ ಖಾನ್ಪುರದ ರೈಲ್ವೆ ಟ್ರ್ಯಾಕ್ ಮೇಲೆ ಗುರುತಿಸಲಾಗದ ಸ್ಥಿತಿಯಲ್ಲಿ ಆರೋಪಿಯ ಮೃತದೇಹ ಪತ್ತೆಯಾಗಿತ್ತು., ಆರೋಪಿ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದರು.

 ರಾಜು ಸಾವಿನಲ್ಲಿ ನಿಗೂಢತೆಯಿದೆ ಎಂದು ಸಿವಿಲ್ ಲಿಬರ್ಟೀಸ್ ಸಮಿತಿ ಅಧ್ಯಕ್ಷ ಪ್ರೊ.ಲಕ್ಷ್ಮಣ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ನಾಲ್ಕು ವಾರಗಳಲ್ಲಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಆದೇಶಿಸಲಾಗಿದೆ. ದೇಶವನ್ನು ಬೆಚ್ಚಿಬೀಳಿಸಿದ ಆರು ವರ್ಷದ ಬಾಲಕಿಯ ಕೊಲೆ ಸೆಪ್ಟೆಂಬರ್ 1 ರಂದು. 27 ವರ್ಷದ ಆರೋಪಿ ಪಕ್ಕದ ಮನೆಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.

27 ವರ್ಷದ ಪಲ್ಲಕೊಂಡ ರಾಜು ಸೆಪ್ಟೆಂಬರ್ 1 ರಂದು ಪಕ್ಕದ ಮನೆಯ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ.

- Advertisement -