ತೆಲಂಗಾಣ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗೆ ಅಧಿಕೃತ ಚಾಲನೆ

Prasthutha|

ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ತೆಲಂಗಾಣದ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅಧಿಕಾರ ಸ್ವೀಕರಿಸಿದ್ದಾರೆ.

- Advertisement -

ಅಧಿಕಾರ ಸ್ವೀಕರದ ವೇಳೆ ಆರು ಗ್ಯಾರಂಟಿಗಳಿಗೆ ಸಹಿ ಹಾಕುವ ಮೂಲಕ ಚಾಲನೆ ನೀಡಿದ್ದಾರೆ. ಇದೀಗ ಈ ಆರು ಗ್ಯಾರಂಟಿಗಳಲ್ಲಿ ಒಂದಾದ ಮಹಾಲಕ್ಷ್ಮಿ ಯೋಜನೆಗೆ ಸಿಎಂ ರೇವಂತ್ ರೆಡ್ಡಿ ಚಾಲನೆ ನೀಡಿದ್ದಾರೆ.

ತೆಲಂಗಾಣ ಸಾರಿಗೆ ಇಲಾಖೆಯು ಈಗಾಗಲೇ ಮಹಾ ಲಕ್ಷ್ಮಿ’ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿಕೊಂಡಿದೆ. ಈ ಯೋಜನೆಯ ಮೂಲಕ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್ಆರ್ಟಿಸಿ) ತೆಲಂಗಾಣ ರಾಜ್ಯದ ಗಡಿಯೊಳಗೆ ಸರ್ಕಾರಿ ಪಲ್ಲೆ ವೆಲುಗು ಮತ್ತು ಎಕ್ಸ್ಪ್ರೆಸ್ ಬಸ್ಗಳಲ್ಲಿ ಯುವತಿಯರು, ಎಲ್ಲಾ ವಯೋಮಾನದ ಮಹಿಳೆಯರು ಮತ್ತು ಟ್ರಾನ್ಸ್ಜೆಂಡರ್ಗಳಿಗೆ ಉಚಿತ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.



Join Whatsapp