ತೆಲಂಗಾಣ | ಹಸುಗಳನ್ನು ಖರೀದಿ ಮಾಡಿದ ಆರೋಪ: ಮದರಸಾ ಮೇಲೆ ಸಂಘಪರಿವಾರದ ಕಾರ್ಯಕರ್ತರಿಂದ ದಾಳಿ

Prasthutha|

- Advertisement -

ಮೇಡಕ್‌; ಹಸುಗಳನ್ನು ಖರೀದಿ ಮಾಡಿದ ಆರೋಪದ ಮೇಲೆ ಸಂಘಪರಿವಾರದ ಕಾರ್ಯಕರ್ತರು ಮದರಸಾ ಮೇಲೆ ದಾಳಿ ನಡೆಸಿದ ಪರಿಣಾಮ ಹಲವಾರು ಜನರು ಗಾಯಗೊಂಡಿರುವ ಘಟನೆ ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ನಡೆದಿದೆ.

ಮಿರಾಜ್ ಉಲ್ ಉಲೂಮ್ ಮದರಸಾದ ಆಡಳಿತ ಮಂಡಳಿಯು ಬಕ್ರೀದ್ ನಿಮಿತ್ತ ದನವನ್ನು ಬಲಿಗಾಗಿ ಖರೀದಿಸಿತ್ತು. ಅವರು ದನಗಳನ್ನು ಕರೆತಂದ ಕೂಡಲೇ ಮದರಸಾದ ಸುತ್ತಲೂ ಜನರ ಗುಂಪು ಜಮಾಯಿಸಿ ಬಲಿಯನ್ನು ವಿರೋಧಿಸಲು ಪ್ರಾರಂಭಿಸಿತು. ಆದರೆ, ಪೊಲೀಸರು ಸ್ಥಳಕ್ಕಾಗಮಿಸಿ ಗುಂಪು ಚದುರಿಸಿದರು.

- Advertisement -

ಏತನ್ಮಧ್ಯೆ, ಸಂಘಪರಿವಾರದ ಕಾರ್ಯಕರ್ತರು ಮದರಸಾ ಮೇಲೆ ದಾಳಿ ಮಾಡಿ ಅನೇಕರನ್ನು ಗಾಯಗೊಳಿಸಿದ್ದಾರೆ ಎಂದು ಎಐಎಂಐಎಂ ಶಾಸಕ ಕಾರ್ವಾನ್ ಎಂ. ಕೌಸರ್ ಮೊಹಿಯುದ್ದೀನ್ ಆರೋಪಿಸಿದ್ದಾರೆ.

Join Whatsapp