ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ತೆಲಂಗಾಣದಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಮ್ಮುಖದಲ್ಲಿ ಆರು ಬಿಆರ್ ಎಸ್ ಎಂಎಲ್ ಸಿಗಳು ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಬಿಆರ್ ಎಸ್ ಎಂಎಲ್ ಸಿಗಳು ಪಕ್ಷ ತೊರೆಯುವ ಪ್ರಕ್ರಿಯೆ ನಡೆದಿದೆ. ದಂಡೆ ವಿಠ್ಠಲ್, ಭಾನು ಪ್ರಸಾದ್ ರಾವ್, ಎಂಎಸ್ ಪ್ರಭಾಕರ್, ಬೊಗ್ಗರಪು ದಯಾನಂದ್, ಯೆಗ್ಗೆ ಮಲ್ಲೇಶಂ ಮತ್ತು ಬಸವರಾಜು ಸರಯ್ಯ ಸೇರಿದಂತೆ ಆರು ಎಂಎಲ್ಸಿಗಳು ಕಾಂಗ್ರೆಸ್ ಸೇರಿದರು.
ತೆಲಂಗಾಣದ ವಿಧಾನ ಪರಿಷತ್ ನಲ್ಲಿ ಸದ್ಯ ಬಿಆರ್ ಎಸ್ ನ 25, ಕಾಂಗ್ರೆಸ್ನ 4 ಸದಸ್ಯರಿದ್ದಾರೆ. 4 ಮಂದಿ ನಾಮನಿರ್ದೇಶಿತ ಸದಸ್ಯರು, ಎಐಎಂಐಎಂನ ಇಬ್ಬರು ಸದಸ್ಯರು, ಬಿಜೆಪಿ, ಪಿಆರ್ ಟಿಯು ಪಕ್ಷದಿಂದ ತಲಾ ಒಬ್ಬ ಸದಸ್ಯ, ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.