ಸೆ.30ರ ಮೆರವಣಿಗೆಯಲ್ಲಿ ಮಾಸ್ಕ್ ಧರಿಸದ ತಪ್ಪಿಗೆ ನ.7ರಂದು ರೂ. 250 ದಂಡ ಪಾವತಿಸಿದ ತೇಜಸ್ವಿ ಸೂರ್ಯ

Prasthutha|

ಬೆಂಗಳೂರು : ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ಮೆರವಣಿಗೆ ನಡೆಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ರೂ. 250 ದಂಡ ಪಾವತಿಸಿದ್ದಾರೆ ಎಂದು ರಾಜ್ಯ ಸರಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

- Advertisement -

ಸೆ.30ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ತನ್ನ ಬೆಂಬಲಿಗರೊಂದಿಗೆ ರಾಜಕೀಯ ಮೆರವಣಿಗೆಯೊಂದನ್ನು ನಡೆಸಿದ್ದ ತೇಜಸ್ವಿ ಸೂರ್ಯ ಕೋವಿಡ್ – 19 ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿದ್ದರು. ಪ್ರಕರಣವೊಂದರ ವಿಚಾರಣೆಯ ಸಂದರ್ಭ ರಾಜ್ಯ ಹೈಕೋರ್ಟ್, ಜನ ಸಾಮಾನ್ಯರಿಗೆ ಮಾತ್ರ ಯಾಕೆ ದಂಡ ವಿಧಿಸುತ್ತೀರಿ? ತೇಜಸ್ವಿ ಸೂರ್ಯರಂತಹ ಪ್ರಭಾವಿ ರಾಜಕಾರಣಿಗಳಿಗೆ ದಂಡ ವಿಧಿಸಿದ್ದೀರಾ? ಈ ವಿಷಯದಲ್ಲಿ ರಾಜ್ಯಕ್ಕೆ ಯಾವ ಸಂದೇಶ ನೀಡುತ್ತಿದ್ದೀರಿ? ಎಂದು ನ.6ರಂದು ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಈ ಕುರಿತು ನ್ಯಾಯಾಲಯಕ್ಕೆ ಇಂದು ಮಾಹಿತಿ ನೀಡಿರುವ ರಾಜ್ಯ ಸರಕಾರ, ಸಂಸದ ತೇಜಸ್ವಿ ಅವರಿಂದ ಮಾಸ್ಕ್ ಧರಿಸದೆ ಮೆರವಣಿಗೆ ನಡೆಸಿದುದಕ್ಕಾಗಿ ನ.7ರಂದು 250 ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.



Join Whatsapp