ಗುಜರಾತ್ ಸರಕಾರ ಉರುಳಿಸಲು ತೀಸ್ತಾ ಸೆಟಲ್ವಾಡ್ ಪಿತೂರಿ: ಎಸ್ ಐಟಿ

Prasthutha|

ನವದೆಹಲಿ: ಗುಜರಾತ್ ಸರಕಾರ ಉರುಳಿಸಲು ನಡೆಸಿದ ಸಂಚಿನಲ್ಲಿ ತೀಸ್ತಾ ಸೆಟಲ್ವಾಡ್ ಅವರ ಪಾತ್ರವಿದೆ ಎಂದು ಗುಜರಾತ್ ಪೊಲೀಸರು ಅಫಿದವಿಟ್ ನಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಆರೋಪವನ್ನು ತಿರಸ್ಕರಿಸಿದೆ.

- Advertisement -

ತೀಸ್ತಾ ಸೆಟಲ್ವಾಡ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ರಿಗೆ ಜಾಮೀನು ನೀಡಬಾರದು ಎಂದು ವಾದಿಸಿದ ಗುಜರಾತ್ ಪೊಲೀಸರು ಅಹಮದಾಬಾದ್ ಕೋರ್ಟಿಗೆ ಅಫಿದವಿತ್ ಸಲ್ಲಿಸಿದರು. ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರಕಾರವನ್ನು ದುರ್ಬಲಗೊಳಿಸಲು ಅಹ್ಮದ್ ಪಟೇಲ್ ಪರವಾಗಿ ತೀಸ್ತಾ ಸೆಟಲ್ವಾಡ್ ಕೆಲಸ ಮಾಡಿದರು ಎಂದು ಪೊಲೀಸರು ಆರೋಪ ಹೊರಿಸಿದ್ದಾರೆ.

ಸೆಟಲ್ವಾಡ್ ಅವರು ಇದಕ್ಕಾಗಿ ಹಣ ಪಡೆದಿದ್ದಾರೆ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದರು ಎಂಬುದು ಪೊಲೀಸರ ಆರೋಪ. ಸಂಚಿನ ದೊಡ್ಡ ಭಾಗವಾಗಿದ್ದವರು ಶ್ರೀಕುಮಾರ್ ಮತ್ತು ಸಂಜೀವ ಭಟ್. ಕೋಮು ಗಲಭೆಯಲ್ಲಿ ತಮಗೆ ಬೇಕಾದಂತೆ ಇವರು ಕತೆ, ಸಾಕ್ಷ್ಯ ಸೇರಿಸಿಕೊಂಡಿದ್ದಾರೆ ಎಂದು ಸಿಟ್ ಆರೋಪಿಸಿದೆ.

- Advertisement -

ಸೆಟಲ್ವಾಡ್ ಅವರು ಸಂಜೀವ್ ಭಟ್ ಜೊತೆ ದಿಲ್ಲಿಯ ಅಹ್ಮದ್ ಪಟೇಲ್ ಮನೆಯಲ್ಲಿ ಅವರನ್ನು ಭೇಟಿಯಾದರು. ಕೋಮು ಗಲಭೆಯಲ್ಲಿ ಹಾನಿಗೊಳಗಾದವರ ಪರ ಹೋರಾಡುವಂತೆ ತೋರಿಸಿಕೊಳ್ಳುತ್ತ ಸೆಟಲ್ವಾಡ್ ಅವರು ರಾಜ್ಯ ಸಭಾ ಸ್ಥಾನ ಪಡೆಯಲೂ ಪ್ರಯತ್ನಿಸಿದರು ಎಂದು ಸಿಟ್ ಆರೋಪಿಸಿದೆ.

ಗುಜರಾತ್ ಮುಖ್ಯಮಂತ್ರಿ ಸರಕಾರದ ವಿರುದ್ಧ ಹೋರಾಡಲು ಸೆಟಲ್ವಾಡ್ ಅವರು ಅಹ್ಮದ್ ಪಟೇಲರಿಂದ 30 ಲಕ್ಷ ರೂಪಾಯಿ ಪಡೆದಿದ್ದಾರೆ ಎಂಬುದು ಸಾಂದರ್ಭಿಕ ಸಾಕ್ಷ್ಯಗಳಿಂದ ಗೊತ್ತಾಗಿದೆ ಎಂದೂ ಪೊಲೀಸರು ಅಫಿದವಿತ್ ನಲ್ಲಿ ತಿಳಿಸಿದ್ದಾರೆ.

ಹೆಚ್ಚುವರಿ ಸೆಶನ್ಸ್ ಜಡ್ಜ್ ಡಿ. ಡಿ. ಥಕ್ಕರ್ ಅವರು ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.



Join Whatsapp