ಆಸ್ಪತ್ರೆಯಿಂದಲೇ ತಾಯಿಯ ಕೈಯಲ್ಲಿದ್ದ ಮಗುವನ್ನು ಅಪಹರಿಸಿದ ತಂಡ

Prasthutha|

ಹುಬ್ಬಳ್ಳಿ: ಅಮ್ಮನ ತೋಳಿನಲ್ಲಿದ್ದ 40 ದಿನದ ಹಸುಗೂಸನ್ನು ನಾಲ್ವರ ತಂಡವೊಂದು ಕಸಿದು ಪರಾರಿಯಾದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.
ಉಮ್ಮೇ ಝೈನಬ್ ಹಾಗೂ ಹುಸೇನ್ ಸಾಬ್ ಶೇಖ್ ಎಂಬ ದಂಪತಿಯ ಮಗುವನ್ನು ಕಳ್ಳತನ ಮಾಡಿದ್ದಾರೆ. ಉಮ್ಮೇ ಝೈನಾಬ್ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.
ಮಗು ಅಳುತ್ತಿದ್ದಾಗ ಸಮಾಧಾನಪಡಿಸಲು ಮಗುವನ್ನು ಎತ್ತಿಕೊಂಡು ಹೊರಗೆ ಹೋಗಿ ನಿಂತಿದ್ದಾಗ ನಾಲ್ವರು ಪುರುಷರ ತಂಡವೊಂದು ಬಂದು ಮಗುವನ್ನು ತಾಯಿಯ ಕೈಯಿಂದ ಕಿತ್ತುಕೊಂಡು ಪರಾರಿಯಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Join Whatsapp