ಮುಂಬೈ: ಟೀಮ್ ಇಂಡಿಯಾ ಆಟಗಾರ ವೃದ್ಧಿಮಾನ್ ಸಾಹ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಬಂಗಾಳ ಪರ ಕಣಕ್ಕಿಳಿದಿರುವ ಸಾಹ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಈ ಮೂಲಕ 17 ವರ್ಷಗಳ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಲು ವೃದ್ಧಿಮಾನ್ ಸಾಹ ನಿರ್ಧರಿಸಿದ್ದಾರೆ. ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ಸಾಹ 15 ವರ್ಷಗಳ ಕಾಲ ಬಂಗಾಳ ಪರವಾಗಿ ಮತ್ತು 2 ವರ್ಷಗಳ ಕಾಲ ತ್ರಿಪುರಾ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ.
ಇನ್ನು 2010 ರಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ವೃದ್ಧಿಮಾನ್ ಸಾಹ 40 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ 56 ಇನಿಂಗ್ಸ್ ಆಡಿರುವ ಅವರು 3 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಒಟ್ಟು 1353 ರನ್ ಕಲೆಹಾಕಿದ್ದಾರೆ.