ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅವಕಾಶ ಕೊಟ್ಟು ಮತ್ತೆ ಪ್ರಶ್ನೆ ಪತ್ರಿಕೆ ವಾಪಸ್ ತೆಗೆದುಕೊಂಡ ಶಿಕ್ಷಕರು

Prasthutha|

ಕೆಂಭಾವಿ: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟು ಮತ್ತೆ ಶಿಕ್ಷಕರು ಪ್ರಶ್ನೆ ಪತ್ರಿಕೆ ವಾಪಸ್ ತೆಗೆದುಕೊಂಡ ಘಟನೆ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದಿದೆ.

- Advertisement -

ಪದವಿ ಮೊದಲನೆ ಸೆಮಿಸ್ಟರ್ ಪ್ರಾಯೋಗಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಆಗಮಿಸಿದ ಸುಮಾರು ಐದು ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಲಾಗಿದೆ.

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಾಲೇಜಿನಲ್ಲಿ ಗದ್ದಲ ಉಂಟಾಗಿದೆ. ಕೂಡಲೇ ಶಿಕ್ಷಕರು ಒಂದು ಗಂಟೆಯ ನಂತರ ಪ್ರಶ್ನೆ ಪತ್ರಿಕೆ ಮರಳಿ ಪಡೆದಿದ್ದಾರೆ.

- Advertisement -

ಈ ಕುರಿತು ಕಾಲೇಜಿನ ಪ್ರಾಂಶುಪಾಲರು ಎಚ್.ಎಂ.ವಗ್ಗರ್ ಘಟನೆ ಬಗ್ಗೆ ನನಗೆನೂ ಗೊತ್ತಿಲ್ಲವೆಂದು ತಿಳಿಸಿದ್ದಾರೆ.




Join Whatsapp