ಶಿಕ್ಷಕರ ನೇಮಕಾತಿ ಹಗರಣ: ಉತ್ತರ ಬಂಗಾಳ ವಿಶ್ವವಿದ್ಯಾಲಯದ ಕುಲಪತಿಯನ್ನು ಬಂಧಿಸಿದ ಸಿಬಿಐ

Prasthutha|

ಕೋಲ್ಕತ್ತಾ: 2016ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಹಾಯಕ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಬಂಗಾಳ ವಿಶ್ವವಿದ್ಯಾಲಯದ ಕುಲಪತಿ ಸುಬಿರೆಸ್ ಭಟ್ಟಾಚಾರ್ಯ ಅವರನ್ನು ಕೇಂದ್ರೀಯ ತನಿಖಾ ದಳ- ಸಿಬಿಐ ಬಂಧಿಸಿದೆ.

- Advertisement -

ಕೋಲ್ಕತಾದ ಸಿಬಿಐ ಕಚೇರಿಗೆ ವಿಚಾರಣೆಗಾಗಿ ತನಿಖಾ ಸಂಸ್ಥೆ ಸೋಮವಾರ ಅವರನ್ನು ಕರೆದ ನಂತರ ಈ ಬಂಧನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಟ್ಟಾಚಾರ್ಯ ಅವರ ನಿವಾಸ ಮತ್ತು ಕಚೇರಿಯನ್ನು ಈ ವರ್ಷದ ಆಗಸ್ಟ್ ನಲ್ಲಿ ಏಜೆನ್ಸಿ ಶೋಧಿಸಿದ ನಂತರ ಅವರ ಬಂಧನವಾಗಿದೆ.

- Advertisement -

ಭಟ್ಟಾಚಾರ್ಯ ಅವರು ಶಾಲಾ ಸೇವಾ ಆಯೋಗದ (ಎಸ್ ಎಸ್ಸಿ) ಮಾಜಿ ಅಧ್ಯಕ್ಷರೂ ಆಗಿದ್ದು, ರಾಜ್ಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಕೇಂದ್ರ ಏಜೆನ್ಸಿ ಮೂಲಗಳು ತಿಳಿಸಿವೆ.

Join Whatsapp