ಶಾಲೆಗಳಿಗೆ ಶಿಕ್ಷಕರು ಬಂದೂಕು ತೆಗೆದುಕೊಂಡು ಹೋಗಲು ಅನುಮತಿ

Prasthutha|

ಅಮೆರಿಕ: ದೇಶದ ದಕ್ಷಿಣ ರಾಜ್ಯವಾದ ಟೆನ್ನೇಸಿಯಲ್ಲಿ ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ ನೀಡುವ ಮಸೂದೆಗೆ ಟೆನ್ನೇಸಿ ಶಾಸನಸಭೆ ಅನುಮೋದನೆ ನೀಡಿದೆ.

- Advertisement -

ಕಳೆದ ವರ್ಷ ನಾಶ್‌ವಿಲ್ಲೆಯ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಗೆ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ಶಾಲಾ ಸಿಬ್ಬಂದಿ ಮೃತರಾಗಿದ್ದರು. ಈ ಘಟನೆ ಬಳಿಕ ಶಾಲೆಗಳಿಗೆ ಹ್ಯಾಂಡ್‌ಗನ್‌ಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂಬ ಕೂಗು ಶಿಕ್ಷಕರ ಕಡೆಯಿಂದ ಎದ್ದಿತ್ತು.

ಶಾಸನಸಭೆಯಲ್ಲಿ ಮಸೂದೆ ಮಂಡನೆಯಾಗಿ ಕಾನೂನಾಗಿರುವುದರಿಂದ ಇನ್ಮುಂದೆ ಶಿಕ್ಷಕರು ನಿಗದಿತ ಕ್ರಮಗಳನ್ನು ಅನುಸರಿಸಿ ಬಂದೂಕುಗಳನ್ನು ತೆಗೆದುಕೊಂಡು ಶಾಲೆಗೆ ಹೋಗಬಹುದಾಗಿದೆ

- Advertisement -

ಪೊಲೀಸರ ಅನುಮತಿಯೊಂದಿಗೆ 40 ಗಂಟೆಗಳ ತರಬೇತಿ, ಮಾನಸಿಕ ಸ್ಥಿತಿಯ ಬಗ್ಗೆ ಮನಶಾಸ್ತ್ರಜ್ಞರ ಪ್ರಮಾಣ ಪತ್ರ ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ಪೂರೈಸಿದ ಶಿಕ್ಷಕರು, ಇತರೆ ಸಿಬ್ಬಂದಿ ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ.

ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

Join Whatsapp