ಕೋಟಾ: 2019 ರಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಿಕ್ಷಕರೊಬ್ಬರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಹನುಮಾನ್ ಪ್ರಸಾದ್ ಅವರು ಪ್ರಕರಣದ ಅಪರಾಧಿ ಫರಿಯದ್ ಅಲಿ ಅವರಿಗೆ 47 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸುರೇಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ಜನವರಿ 17, 2019 ರಂದು ರಾಮ್ ಗರ್ ಎಂಬಲ್ಲಿ ಶಾಲಾ ಪ್ರವಾಸದ ವೇಳೆಯಲ್ಲಿ ಶಿಕ್ಷಕ ಬಾಲಕಿಗೆ ನೀಡಿದ್ದರು. ಪ್ರವಾಸದಿಂದ ಹಿಂದಿರುಗಿದ ನಂತರ ಬಾಲಕಿಯನ್ನು ತನ್ನ ಮನೆಗೆ ತಲುಪಿಸುವ ನೆಪದಲ್ಲಿ ದಾರಿಮಧ್ಯೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದನು.
ಮಾತ್ರವಲ್ಲ ಆರೋಪಿ ಅಲಿ ಅಪ್ರಾಪ್ತೆಯನ್ನು ನಿರಂತರ ಅತ್ಯಾಚಾರ ಎಸಗುತ್ತಲೇ ಇದ್ದನು. ಈ ಹಿನ್ನೆಲೆಯಲ್ಲಿ ಆಕೆ ನೀಡಿದ ದೂರಿನನ್ವಯ ಆರೋಪಿಯ ವಿರುದ್ಧ ಇಟಾವಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠ 11 ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಶಿಕ್ಷೆ ಪ್ರಕಟಿಸಲಾಗಿದೆ.