ಮುಂಬೈ: ಲಿಫ್ಟ್ ನಲ್ಲಿ ಸಿಲುಕಿ ಅಧ್ಯಾಪಕಿಯೊಬ್ಬರು ಮೃತಪಟ್ಟ ಘಟನೆ ಉತ್ತರ ಮುಂಬೈನ ಮಲಡ್ ಬಳಿಯ ಚಿಂಚೊಳ್ಳಿ ಬಂದರ್ ಬಳಿಯ ಸೈಂಟ್ ಮೇರಿಸ್ ಶಾಲೆಯಲ್ಲಿ ನಡೆದಿದೆ.
ಜೆನೆಲ್ ಫೆರ್ನಾಂಡೀಸ್(26) ಮೃತ ಪಟ್ಟ ಅಧ್ಯಾಪಕಿ. 2ನೇ ಮಹಡಿಗೆ ಹೋಗಲು ಲಿಫ್ಟ್ ಗೆ ಕಾಯುತ್ತಿದ್ದ ಜೆನೆಲ್ ಫರ್ನಾಂಡೀಸ್ ಲಿಫ್ಟ್ ಒಳಗೆ ಪ್ರವೇಶಿಸುತ್ತಿದ್ದಂತೆ ಬಾಗಿಲು ಹಾಕಿಕೊಂಡಡು ಅಧ್ಯಾಪಕಿಯ ಕಾಲು ಬಾಗಿಲ ನಡುವೆ ಸಿಲುಕಿಕೊಂಡಿದೆ. ಲಿಫ್ಟ್ ಕಳಗೆ ಹೋದಂತೆ ಟೀಚರ್ ಅವರ ತಲೆ ಬಡಿದು ನಜ್ಜುಗುಜ್ಜಾಗಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದಿದೆ.
ಲಿಫ್ಟ್ ನಲ್ಲಿ ಅಧ್ಯಾಪಕಿ ಸಿಲುಕಿಕೊಂಡಿರುವುದು ತಿಳಿಯುತ್ತಿದ್ದಂತೆ ಶಾಲೆಯ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಆಕಸ್ಮಿಕ ಘಟನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಒಂದು ವೇಳೆ ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.