ಶಿಕ್ಷಕಿ ಧರ್ಮ ನಿಂದಿಸಿರಲಿಲ್ಲ, ಶಾಸಕರ ಒತ್ತಡಕ್ಕೆ ಮಣಿಯಬೇಕಾಯಿತು: ಜೆರೋಸಾ ಶಾಲೆ HM

Prasthutha|

ಮಂಗಳೂರು: ಶಿಕ್ಷಕಿ ಸಿಸ್ಟರ್‌ ಪ್ರಭಾ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರಲ್ಲ, ಶಾಸಕ ವೇದವ್ಯಾಸ್‌ ಕಾಮತ್‌ ಶಾಲಾ ಆಡಳಿತವನ್ನು ಬಲವಂತ ಪಡಿಸಿದರು ಎಂದು ಸಂತ ಜೆರೋಸಾ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ಹೇಳಿದ್ದಾರೆ.

- Advertisement -

ಈ ಕುರಿತು ಅವರು,ಜೆರೋಸಾ ಶಾಲೆ ಫೆಬ್ರವರಿ 8ರಂದು ಒಂದು ದುರಾದೃಷ್ಟಕರ ಮತ್ತು ದುಃಖಕರ ಘಟನೆಗೆ ಸಾಕ್ಷಿಯಾಯಿತು. ಶಾಲೆಯ ಕಳೆದ 60 ವರ್ಷಗಳ ಅಸ್ತಿತ್ವದ ಇತಿಹಾಸದಲ್ಲಿಯೇ ಇಂತಹ ಘಟನೆ ಇದೇ ಮೊದಲು. ಫೆಬ್ರವರಿ 10 ರಂದು ನಾಲ್ಕು ಜನರು ಮುಖ್ಯೋಪಾಧ್ಯಾಯಿನಿ ಅವರನ್ನು ಭೇಟಿಯಾಗಿ ಸಿಸ್ಟರ್‌ ಪ್ರಭಾ ಅವರು ರವೀಂದ್ರನಾಥ್‌ ಠಾಗೋರ್‌ ಅವರ “ವರ್ಕ್‌ ಈಸ್‌ ವರ್ಶಿಪ್”‌ ಕವನವನ್ನು ಕಲಿಸುತ್ತಿರುವ ಸಂದರ್ಭ ಹಿಂದೂ ಧರ್ಮ ಮತ್ತು ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ದೂರಿದರು. ಈ ವಿಚಾರವನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯೋಪಾಧ್ಯಾಯಿನಿ ಅವರಿಗೆ ನೀಡಿದ್ದರು. ವಿಚಾರಣೆ ನಡೆಸಿದಾಗ ಸಂಬಂಧಿತ ಶಿಕ್ಷಕಿ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ ಎಂದು ಹೇಳಿದ್ದಾರೆ.

ಯಾವುದೇ ದೇವರ ವಿರುದ್ಧ ತಾನು ಏನನ್ನೂ ಹೇಳಿಲ್ಲ, ಆದರೆ ಕವನದ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ್ದಾಗಿ ಶಿಕ್ಷಕಿ ಹೇಳಿದ್ದಾರೆ.

- Advertisement -

ವಿಚಾರಣೆ ವೇಳೆ ಸಂಬಂಧಪಟ್ಟ ಶಿಕ್ಷಕಿ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದರು. ನಿಮ್ಮ ಅವಲೋಕನಕ್ಕಾಗಿ ಕವಿತೆ ಇಲ್ಲಿದೆ.

Work is Worship

Leave this chanting and singing
and telling of beads! Whom dost thou
worship in this lonely dark corner of a
temple with doors all shut? Open
thine eyes and see thy God is not before thee
He is there the tiller is tilling
the hard ground and where the path-maker
is breaking stones. He is with them
in sun and shower, and his
garment is covered with dust. Put off
thy holy mantle and even like him come
down on the dusty soil!
Deliverance? Where is this deliverance
to be found? Our master himself
has joyfully taken upon him the bonds of
creation; he is bound with us all forever.
Come out of thy meditations and
leave aside thy flowers and incense!
What harm is there if thy clothes
become tattered and stained? Meet
him and stand by him in toil and in
sweat of thy brow.

ಕವಿತೆಯನ್ನು ಕಲಿಸುವಾಗ ಶಿಕ್ಷಕರು ಹೀಗೆ ವಿವರಿಸಿದ್ದಾರೆ:
⦁ “ದೇವಾಲಯಗಳು, ಚರ್ಚುಗಳು ಮತ್ತು ಮಸೀದಿಗಳು ಕೇವಲ ಕಟ್ಟಡಗಳು. ದೇವರು ಮಾನವ ಹೃದಯದಲ್ಲಿ ನೆಲೆಸಿದ್ದಾನೆ. ಆದ್ದರಿಂದ ದೇವರ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲಬಾರದು.
⦁ ನಾವು ಕೆಲಸ ಮತ್ತು ಮನುಷ್ಯರನ್ನು ಗೌರವಿಸ ಬೇಕು ಮತ್ತು ಅವರಲ್ಲಿ ದೇವರನ್ನು ಕಾಣಬೇಕು.
⦁ ದೇವರು ರಚನೆಗಳಲ್ಲಿ ಅಸ್ತಿತ್ವದಲ್ಲಿಲ್ಲ. ಆದರೆ ಮಾನವ ಹೃದಯದಲ್ಲಿ ಮತ್ತು ನಾವೆಲ್ಲರೂ ದೇವರ ದೇವಾಲಯಗಳು.”
ಶಿಕ್ಷಕಿ ತಾನು ಯಾವುದೇ ದೇವರ ವಿರುದ್ಧ ಮಾತನಾಡಿಲ್ಲ. ಆದರೆ ಕವಿತೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ್ದಾರೆ. ತಾನು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ ಎಂದು ತಿಳಿಸಿದ್ದಾರೆ.

ಪ್ರಚಾರದಲ್ಲಿರುವ ಧ್ವನಿ ಸಂದೇಶದಲ್ಲಿ ಅನಾಮಧೇಯ ಮಹಿಳೆ ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ, ಸಿಸ್ಟರ್‌ ಪ್ರಭಾ ಅವರು ಹಿಂದೂ ಅಥವಾ ಯಾವುದೇ ಇತರ ಧರ್ಮ ಅಥವಾ ಪ್ರಧಾನಿ ಕುರಿತಂತೆ ಈ ಕವನವನ್ನು ವಿವರಿಸುವಾಗ ನಿಂದನಾತ್ಮಕ ಹೇಳಿಕೆಗಳನ್ನು ನೀಡಿಲ್ಲ ಎಂದು ಮುಖ್ಯೋಪಾಧ್ಯಾಯಿನಿ ಹೇಳಿದ್ದಾರೆ.

ಪ್ರಚಾರದಲ್ಲಿರುವ ಆಡಿಯೋ ಸಂದೇಶ ಸತ್ಯಕ್ಕೆ ದೂರವಾದುದು. ಅದರ ಬಗ್ಗೆ ತನಿಖೆ ನಡೆಸಬೇಕು ಹಾಗೂ ಯಾವುದೇ ಅಹಿತಕರ ಘಟನೆಯಿಂದ ರಕ್ಷಣೆ ಒದಗಿಸಬೇಕೆಂದು ಶಾಲಾ ಆಡಳಿತವು ಜಿಲ್ಲಾಡಳಿತವನ್ನು ಸಂಪರ್ಕಿಸಿತ್ತು. ಆಡಿಯೋ ಕುರಿತಂತೆ ಕ್ರಮಕೈಗೊಳ್ಳುವಂತೆಯೂ ಪೊಲೀಸರಿಗೆ ದೂರು ನೀಡಲಾಗಿತ್ತು. ಫೆಬ್ರವರಿ 12ರಂದು ಶಿಕ್ಷಣ ಇಲಾಖೆ, ಬಿಇಒ ಕಚೇರಿಯ ವಿಷಯ ಪರಿವೀಕ್ಷಕ, ಡಿಡಿಪಿಐ ಕಚೇರಿಕಚೇರಿಯ ಸಮನ್ವಯಕಾರರು, ಬಿಇಒ, ಇಸಿಒ ಮತ್ತು ಸಿಆರ್‌ಪಿ ಶಾಲೆಗೆ ಭೇಟಿ ನೀಡಿದಾಗ ಅವರ ವಿನಂತಿಯಂತೆ ವಾಸ್ತವಾಂಶವನ್ನು ವಿವರಿಸಲಾಯಿತು ಎಂದು ಮುಖ್ಯೋಪಾಧ್ಯಾಯಿನಿ ವಿವರಣೆ ನೀಡಿದ್ದಾರೆ.

ಈ ಘಟನೆ ನಂತರ ಸ್ಥಳೀಯ ಶಾಸಕರಾದ ವೇದವ್ಯಾಸ್‌ ಕಾಮತ್‌ ಅವರು ಹಿಂದುತ್ವ ಕಾರ್ಯಕರ್ತರ ಗುಂಪಿನೊಂದಿಗೆ ಆಗಮಿಸಿ ಶಾಲೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರ ಉಪಸ್ಥಿತಿಯನ್ನು ಗಮನಿಸಿದಗಮನಿಸಿದ ಶಾಲಾಡಳಿತ, ಗೌರವಪೂರ್ವಕವಾಗಿ ಅವರನ್ನು ಶಾಲೆಯೊಳಗೆ ಆಹ್ವಾನಿಸಿದರೂ ಅವರು ಬರಲು ನಿರಾಕರಿಸಿದ್ದು, ಶಾಲೆ ಮತ್ತು ಆಡಳಿತದ ವಿರುದ್ಧ ಪ್ರತಿಭಟಿಸಿದ್ದಾರೆ. ಎಲ್ಲರಿಗಾಗಿ ಇರುವ ಶಾಸಕರೊಬ್ಬರು ತತಮ್ಮ ಸುತ್ತ ಮಕ್ಕಳನ್ನು ಸೇರಿಸಿ ತಮ್ಮದೇ ಶಾಲೆಯ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಚೋದಿಸಿದ್ದು ಬೇಸರವಾಗಿದೆ. ಕವನವನ್ನು ಕಲಿಸುವಾಗ ತರಗತಿಯಲ್ಲಿಲ್ಲದ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳನ್ನೂ ಘೋಷಣೆಗಳನ್ನು ಕೂಗುವಂತೆ ಮಾಡಲಾಯಿತು ಎಂದು ಮುಖ್ಯೋಪಾಧ್ಯಾಯಿನಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಶಾಲೆಯ ಗೇಟಿನಲ್ಲಿ ಪ್ರತಿಭಟಿಸುತ್ತಿದ್ದ ಶಾಸಕರನ್ನು ಭೇಟಿಯಾಗುವಂತೆ ಬಿಇಒ ಮತ್ತು ಇತರ ಶಿಕ್ಷಣ ಇಲಾಖೆ ಆಧಿಕಾರಿಗಳು ನಮಗೆ ಹೇಳಿದರು. ನಾನು ಅವರನ್ನು ನಂತರ ಭೇಟಿಯಾದೆವು. ಅವರು ಶಿಕ್ಷಕಿಯನ್ನು ತಕ್ಷಣ ಅಮಾನತುಗೊಳಿಸುವಂತೆ ಹೇಳಿದರಲ್ಲದೆ, ಇಲ್ಲದೇ ಹೋದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಬೆದರಿಸಿದರು. ಶಿಕ್ಷಣ ಸಂಸ್ಥೆಯ ನಿಯಮಗಳಂತೆ ತನಿಖೆ ನಡೆಸದೆ ಶಿಕ್ಷಕಿಯನ್ನು ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ. ಆದರೆ ಶಾಸಕರ ನೇತೃತ್ವದ ಗುಂಪು ಶಿಕ್ಷಕಿಯನ್ನು ತಕ್ಷಣ ಅಮಾನತುಗೊಳಿಸುವಂತೆ ನನ್ನನ್ನು ಬಲವಂತಪಡಿಸಿದರು. ಬೇರೆ ದಾರಿಯಿಲ್ಲದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಜಮಾಯಿಸಿದ ಜನರನ್ನು ಚದುರಿಸಲು ಸಿಸ್ಟ‌ರ್ ಪ್ರಭಾ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಹೇಳಿಕೆ ನೀಡುವುದು ನನಗೆ ಅನಿವಾರ್ಯವಾಯಿತು ಎಂದು ಮುಖ್ಯೋಪಾಧ್ಯಾಯಿನಿ ಹೇಳಿದ್ದಾರೆ.

ಸಿಸ್ಟ‌ರ್ ಪ್ರಭಾ ಅವರಿಗೆ ಶಿಕ್ಷಕ ವೃತ್ತಿಯಲ್ಲಿ ಒಟ್ಟು 16 ವರ್ಷಗಳ ಅನುಭವವಿದ್ದು, ಐದು ವರ್ಷಗಳಿಂದ ಜೆರೋಸಾ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿಯ ತನಕ ಆಕೆಯ ವಿರುದ್ಧ ಯಾವುದೇ ದೂರು ಇಲ್ಲ ಎಂದೂ ಹೆಚ್‌ಎಂ ತಿಳಿಸಿದ್ದಾರೆ.

ವೈರಲ್ ಆಡಿಯೋದಲ್ಲಿ ಶಾಲೆಯ ಕುರಿತು ಮಾತನಾಡಿದ ಮಹಿಳೆಯು ನಿಜವಾಗಿಯೂ ಜೆರೋಸಾ ವಿದ್ಯಾರ್ಥಿಯ ಹೆತ್ತವರೇ? ಹಾಗಿಲ್ಲದೇ ಇದ್ದರೆ, ಇಂತಹ ಆರೋಪಗಳನ್ನು ಮಾಡುವ ಹಿಂದಿನ ಆಕೆಯ ಉದ್ದೇಶವೇನು? ಆಕೆ ಹೆತ್ತವರಾಗಿದ್ದರೆ, ಈ ವಿಚಾರದ ಕುರಿತು ಶಾಲಾ ಆಡಳಿತಕ್ಕೆ ಲಿಖಿತ ದೂರು ಏಕೆ ನೀಡಿಲ್ಲ ಎಂದು ಮುಖ್ಯೋಪಾಧ್ಯಾಯಿನಿ ಪ್ರಶ್ನಿಸಿದ್ದಾರೆ.

ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕನಿಷ್ಠ ಶುಲ್ಕ ಪಡೆದು ನಡೆಸುತ್ತಿರುವ ಶಾಲೆಯ ಗೌರವಕ್ಕೆ ಚ್ಯುತಿ ತರುವ ಉದ್ದೇಶದಿಂದ ಈ ಘಟನೆ/ಪ್ರತಿಭಟನೆಯನ್ನು ಪೂರ್ವಯೋಜಿತವಾಗಿ ನಡೆಸಲಾಗಿದೆ ಎಂದು ತೋರುತ್ತದೆ. ಜಾತ್ಯತೀತ ಮನೋಭಾವನೆ ಹೊಂದಿರುವ ನಾವು ಎಲ್ಲಾ ವಿದ್ಯಾರ್ಥಿಗಳನ್ನು ಗೌರವಿಸುತ್ತೇವೆ ಮತ್ತು ಜಾತಿ, ಮತ ಅಥವಾ ಧರ್ಮದ ಆಧಾರದಲ್ಲಿ ಯಾರ ವಿರುದ್ಧವೂ ತಾರತಮ್ಯ ಮಾಡುವುದಿಲ್ಲ. ಪ್ರತಿ ವರ್ಷ ನಾವು ದೀಪಾವಳಿ, ಕ್ರಿಸ್ಮಸ್ ಮತ್ತು ಈದ್ ಆಚರಿಸುತ್ತೇವೆ. ಈ ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ಜೆರೋಸಾ ಶಾಲೆಯ ಆವರಣಕ್ಕೆ ಮಾಧ್ಯಮ ಸಿಬ್ಬಂದಿಯನ್ನು ಪೊಲೀಸರು ಅನುಮತಿಸಲಿಲ್ಲ ಎಂದು ನಮಗೆ ತಿಳಿದು ಬಂದಿದೆ. ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಮುಖ್ಯೋಪಾಧ್ಯಾಯಿನಿ ಸಿಸ್ಟ‌ರ್ ಅನಿತಾ ಇದೇ ಸಂದರ್ಭ ಹೇಳಿದ್ದಾರೆ.

Join Whatsapp