ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ:  ಶಿಕ್ಷಕಿಯ ಬಂಧನ

Prasthutha|

ತಿರುವನಂತಪುರಂ: ಆಲ್ಕೋಹಾಲ್ ನೀಡಿ 16 ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕಿಯೊಬ್ಬಳನ್ನು ಬಂಧಿಸಿರುವ ಘಟನೆ ತ್ರಿಶ್ಶೂರ್ ನಲ್ಲಿ ನಡೆದಿದೆ.

- Advertisement -

ಸಂತ್ರಸ್ತ ಬಾಲಕ ಮಾನಸಿಕ ತೊಂದರೆಯಿಂದ ಬಳಲುತ್ತಿದುದ್ದನ್ನು ನೋಡಿ ಆಪ್ತ ಸಮಾಲೋಚನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯು ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಶಾಲಾ ಶಿಕ್ಷಕಿಯೊಬ್ಬರು ಬಾಲಕನ ವರ್ತನೆಯಲ್ಲಾದ ಬದಲಾವಣೆಯನ್ನು ಗಮನಿಸಿ, ಆತನನ್ನು ವಿಚಾರಿಸಿದಾಗ ಯಾವುದನ್ನೂ ಬಹಿರಂಗಪಡಿಸದಿದ್ದರಿಂದ, ಆತನಿಗೆ ಆಪ್ತ ಸಮಾಲೋಚನೆ ಕೊಡಿಸಲಾಯಿತು. ಈ ವೇಳೆ ಆತ ಟ್ಯೂಷನ್ ಶಿಕ್ಷಕಿ ನಿತ್ಯವು ಆಲ್ಕೋಹಾಲ್ ನೀಡಿ, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದದ್ದನ್ನು ತಿಳಿಸಿದ್ದಾನೆ. ತಕ್ಷಣ ಶಾಲಾ ಶಿಕ್ಷಕಿ ಈ ವಿಚಾರವನ್ನು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಠಾಣೆಗೆ ತಿಳಿಸಿದರು ಎನ್ನಲಾಗಿದೆ.

- Advertisement -

ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಬಾಲಕನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಪರೀಕ್ಷಾ ವರದಿಯಲ್ಲಿ ದೌರ್ಜನ್ಯ ನಡೆದಿರುವುದು ದೃಢಪಟ್ಟ ಬಳಿಕ ಟ್ಯೂಷನ್ ಶಿಕ್ಷಕಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಆಕೆಯ ವಿರುದ್ಧ ಪೊಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Join Whatsapp