ನವದೆಹಲಿ: ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷವು ಸ್ಪೀಕರ್ ಹುದ್ದೆ ಹಾಗೂ ಐದು ಸಚಿವ ಸಂಪುಟ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ ಎಂದು ವರದಿಯಾಗಿದೆ.
ಟಿಡಿಪಿಯು ಗ್ರಾಮೀಣಾಭಿವೃದ್ಧಿ, ವಸತಿ, ನಗರಾಭಿವೃದ್ಧಿ ವ್ಯವಹಾರಗಳು, ಬಂದರು ಹಾಗೂ ಸಾಗಣೆ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಗಾಗಿ ಬೇಡಿಕೆ ಇಟ್ಟಿದೆ ಎಂದು ಟಿಡಿಪಿ ಸಂಸದರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಆಂಧ್ರಪ್ರದೇಶ ತೀವ್ರ ಹಣದ ಮುಗ್ಗಟ್ಟು ಎದುರಿಸುತ್ತಿರುವುದರಿಂದ, ಹಣಕಾಸು ರಾಜ್ಯ ಸಚಿವ ಖಾತೆಗೂ ಬೇಡಿಕೆ ಇರಿಸಿದೆ ಎನ್ನಲಾಗಿದೆ.
ಎನ್ ಡಿಎ ಮೈತ್ರಿಕೂಟದ ಎರಡನೆ ಅತಿ ದೊಡ್ಡ ಮೈತ್ರಿ ಪಕ್ಷವಾಗಿ ಉದ್ಭವಿಸಿರುವ ಟಿಡಿಪಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಜೆಡಿಯುನ ನಿತೀಶ್ ಕುಮಾರ್, ಮೂರನೆ ಅವಧಿಯ ಎನ್ ಡಿಎ ಸರಕಾರ ರಚನೆಯಲ್ಲಿ ಕಿಂಗ್ ಮೇಕರ್ ಪಾತ್ರ ನಿರ್ವಹಿಸಿದ್ದಾರೆ.