ಮಂಗಳೂರು : ‘ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು’ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ನನ್ನ ಹೇಳಿಕೆಯನ್ನು ನಾನು ಸಮರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪೂಂಜಾ, ಸಂಸದ ಡಿಕೆ ಸುರೇಶ್ ಕುಮಾರ್ ಹೇಳಿಕೆಗೆ ಸಾಮಾನ್ಯ ರೀತಿ ಖಂಡನೆ ಮಾಡಿದರೆ ಅವರಿಗೆ ಅರ್ಥ ಆಗಲ್ಲ. ಹಾಗಾಗಿ ಈ ರೀತಿಯ ಹೇಳಿಕೆ ನೀಡಿ ಮನವರಿಕೆ ಮಾಡಲು ಪ್ರಯತ್ನಿಸಿದ್ದೇನೆ. ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂಬುವುದನ್ನು ನಾನು ಸಮರ್ಥನೆ ಮಾಡುತ್ತೇನೆ ಎಂದಿದ್ದಾರೆ.
ಹಿಂದೂಗಳ ತೆರಿಗೆಯನ್ನು ಹಿಂದೂಗಳಿಗೆ ಅಭಿವೃದ್ಧಿ ಮಾಡಿ ಅಂತಾ ಕೇಳೋದ್ರಲ್ಲಿ ತಪ್ಪೇನಿದೆ? ಉತ್ತರ- ದಕ್ಷಿಣ ಭಾರತ ಅಂತಾ ವಿಭಜನೆ ಮಾಡಲು ಕಾಂಗ್ರೆಸ್ ಹೊರಟಿದೆ. ಹಿಂದೂಗಳ ತೆರಿಗೆಯನ್ನು ಲೆಕ್ಕ ಹಾಕೋಕೆ ಕಷ್ಟವೇ ಇಲ್ಲ. ಪ್ರತಿಯೊಬ್ಬನ ಹೆಸರಿನ ಮುಂದೆ ಅವನ ಧರ್ಮವೂ ಉಲ್ಲೇಖವಾಗಿರುತ್ತದೆ. ಸಿಂಗಲ್ ಟ್ಯಾಪ್ ನಲ್ಲಿ ತೆರಿಗೆಯನ್ನು ವಿಭಾಗಿಸಬಹುದಾಗಿದೆ. ಕಾಂಗ್ರೆಸ್ ತೆರಿಗೆ ವಿಚಾರ ಒಂದು ಕ್ಷುಲ್ಲಕ ವಿಚಾರವಾಗಿದ್ದು, ಈ ವಿಚಾರವನ್ನು ಇಟ್ಕೊಂಡು ದೇಶ ವಿಭಜನೆಯನ್ನು ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ವಿರುದ್ದ ಹರೀಶ್ ಪೂಂಜಾ ಕಿಡಿಗಾರಿದ್ದಾರೆ.