ಬಂಗಾಳ ಬಿಜೆಪಿಯಲ್ಲಿ ‘ನಾಯಿ‌’ ಜಗಳ| ಕೈಲಾಶ್ ವಿಜಯವರ್ಗಿಯಾರನ್ನು ಶ್ವಾನಕ್ಕೆ ಹೋಲಿಸಿದ ರೋಯ್!

Prasthutha|

ಹೊಸದಿಲ್ಲಿ: ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಆಂತರಿಕ ಕಲಹದ ವಾತಾವರಣ ನಿರ್ಮಾಣವಾಗಿದ್ದು, ತ್ರಿಪುರಾ ಮಾಜಿ ರಾಜ್ಯಪಾಲ ತಥಾಗತ ರೋಯ್ ಮತ್ತು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಅವರ ಜಗಳ ಈಗ ಬೀದಿಗೆ ಬಂದಿದೆ.

- Advertisement -

ಇತ್ತೀಚೆಗೆ ತಥಾಗತ ರಾಯ್ ಅವರು ಮಾಡಿರುವ ಟ್ವೀಟ್ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದ ಉಸ್ತುವಾರಿ, ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಅವರನ್ನು ನಾಯಿಗೆ ಹೋಲಿಸಿ ‘ಪಶ್ಚಿಮ ಬಂಗಾಳದಲ್ಲಿ ಮತ್ತೆ ವೊಡಾಫೋನ್’ ಎಂಬ ಶೀರ್ಷಿಕೆಯಡಿಯಲ್ಲಿ ರಾಯ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.
ತೃಣಮೂಲ ಕಾಂಗ್ರೆಸ್ 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 77 ಸ್ಥಾನಗಳನ್ನು ಪಡೆದಿದೆ.

- Advertisement -

ಚುನಾವಣಾ ಸೋಲಿನ ನಂತರ ರಾಯ್ ಅವರು ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ರಾಜ್ಯ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ, ಶಿವಪ್ರಕಾಶ್ ಮತ್ತು ಅರವಿಂದ್ ಮೆನೊನ್ ಅವರನ್ನು ದೂಷಿಸುತ್ತಾ ಬಂದಿದ್ದರು. ನಾಯಕತ್ವದ ತಪ್ಪು ನಿರ್ಧಾರಗಳು ಮತ್ತು ಅಭ್ಯರ್ಥಿಯನ್ನು ನಿರ್ಧರಿಸುವಲ್ಲಿನ ತಪ್ಪಿನಿಂದಾಗಿ ವೈಫಲ್ಯ ಸಂಭವಿಸಿದೆ ಎಂದು ತಥಾಗತ ರಾಯ್ ಟ್ವೀಟ್ ಮಾಡಿದ್ದರು.



Join Whatsapp