ಕರ್ನಾಟಕಕ್ಕೆ ಅನ್ಯಾಯವಾದ್ರೆ ಸಹಿಸಲ್ಲ : ʻಕರ್ನಾಟಕ ಬಂದ್‌ʼಗೆ ತಮಿಳು ಸಂಘದಿಂದ ಬೆಂಬಲ

Prasthutha|

ಚಾಮರಾಜನಗರ: ಕಾವೇರಿ ಹೋರಾಟದ ಭಾಗವಾಗಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಾಮರಾಜನಗರ ಜಿಲ್ಲಾ ತಮಿಳಿಗರ ಸಂಘ ಬೆಂಬಲ ಘೋಷಿಸಿದೆ.

- Advertisement -

ಕರ್ನಾಟಕ ಬಂದ್ ಸಂಬಂಧ ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪೂರ್ವಭಾವಿ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಚಾಮರಾಜನಗರ ಜಿಲ್ಲಾ ತಮಿಳಿಗರ ಸಂಘದ ಕಾರ್ಯದರ್ಶಿ ಜಗದೀಶನ್ ಮಾತನಾಡಿ, ಕರ್ನಾಟಕದಲ್ಲಿ 19 ತಮಿಳು ಸಂಘಟನೆಗಳಿವೆ. ನಾವೆಲ್ಲರೂ ಕನ್ನಡಿಗರೇ ಆಗಿದ್ದೇವೆ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಒಂದು ತೊಟ್ಟು ನೀರನ್ನು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ. ಕಾವೇರಿ ವಿಚಾರದಲ್ಲಿ ಯಾವತ್ತೂ ತಮಿಳುನಾಡಿನ ವಿರುದ್ಧ ದಿಕ್ಕಾರ ಕೂಗ್ತೀವಿ ಎಂದು ಹೇಳಿದ್ದಾರೆ.

Join Whatsapp