ತಬ್ಲೀಗ್ ಜಮಾಅತ್ ವಿರುದ್ಧ ವೀಡಿಯೋ ತಯಾರಿಸಿದ್ದ ವಿವಾದಿತ ಯೂಟ್ಯೂಬರ್ ಮತ್ತೆ ಬಂಧನ

Prasthutha|

ಬಿಪಿನ್ ರಾವತ್ ಬಗ್ಗೆ ಟ್ವೀಟ್ ಮಾಡಿ ಬಂಧಿತನಾಗಿದ್ದ ಮಾರಿದಾಸ್!

- Advertisement -

ಹೊಸದಿಲ್ಲಿ: ತಮಿಳುನಾಡು ಮೂಲದ ವಿವಾದಿತ ಯೂಟ್ಯೂಬರ್ ಮಾರಿದಾಸ್ ಮತ್ತೆ ಬಂಧನಕ್ಕೊಳಗಾಗಿದ್ದಾನೆ. ತಬ್ಲೀಗ್ ಜಮಾತ್ ವಿರುದ್ಧದ ವೀಡಿಯೋ ತಯಾರಿಸಿದ್ದ ಬಗ್ಗೆ ಆತನನ್ನು ಬಂಧಿಸಲಾಗಿದೆ.

ತಿರುನೇಲ್ವೇಲಿ ಜಿಲ್ಲೆಯ ಸಮಾಜ ಸೇವಕ ಖಾದರ್ ಮೀರಾನ್ ಅವರು 2020ರ ಏಪ್ರಿಲ್ 4ರಂದು ಸಲ್ಲಿಸಿದ ದೂರಿನ ಮೇರೆಗೆ ಮಾರಿದಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

‘ಭಯೋತ್ಪಾದನೆ+ಕರೋನಾ= ಭಾರತದ ಹೊಸ ಸಮಸ್ಯೆ / ತಬ್ಲೀಗ್ ಜಮಾತ್’ ಶೀರ್ಷಿಕೆಯ ಮಾರಿದಾಸ್ ನ ಯೂಟ್ಯೂಬ್ ವೀಡಿಯೊ ಪೋಸ್ಟ್ ವಿರುದ್ಧ ಮೀರಾನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ತಬ್ಲೀಗ್ ಜಮಾತ್‌ ನಲ್ಲಿ ಭಾಗವಹಿಸುವ ಮುಸ್ಲಿಮರನ್ನು ಭಯೋತ್ಪಾದಕರೆಂದು ಬಿಂಬಿಸಿದ ಮಾರಿದಾಸ್, ಕೋವಿಡ್ ವಿಸ್ತರಿಸುವುದು ಅವರ ಗುರಿ ಎಂದು ಪ್ರಚಾರ ಮಾಡಿದ್ದಾರೆ ಎಂದು ಮೀರಾನ್ ಆರೋಪಿಸಿದ್ದರು.

ಈ ಹಿಂದೆ, ಜನರಲ್ ಬಿಪಿನ್ ರಾವತ್ ಸೇರಿದಂತೆ 14 ಜನರನ್ನು ಬಲಿತೆಗೆದುಕೊಂಡ ಹೆಲಿಕಾಪ್ಟರ್ ಅಪಘಾತದ ಕುರಿತು ಟ್ವಿಟರ್‌ ನಲ್ಲಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಮಾರಿದಾಸ್ ನನ್ನು ಬಂಧಿಸಲಾಗಿತ್ತು.



Join Whatsapp