ಚೆನ್ನೈ: ತಮಿಳುನಾಡಿನ ವಿದ್ಯಾರ್ಥಿಯೊಬ್ಬ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್’ನಲ್ಲಿ ಅರೆಸೈನಿಕ ಪಡೆಯನ್ನು ಸೇರಿಕೊಂಡಿದ್ದಾನೆ.
ಕೊಯಮತ್ತೂರು ಜಿಲ್ಲೆಯ 21 ವರ್ಷದ ವಿದ್ಯಾರ್ಥಿ ಸೈನಿಕೇಶ್ ರವಿಚಂದ್ರನ್ ಅವರು, ಉಕ್ರೇನ್’ನ ಪ್ಯಾರಾ ಮಿಲಿಟರಿ ಪಡೆ ಸೇರಿರುವುದಾಗಿ ವರದಿಯಾಗಿದೆ.
2018ರಲ್ಲಿ ಸೈನಿಕೇಶ್ ಹಾರ್ಕಿವ್’ನ ನ್ಯಾಶನಲ್ ಏರೊಸ್ಪೇಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ತೆರಳಿದ್ದರು. ಈ ವರ್ಷದ ಜುಲೈಗೆ ಅವರು ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿತ್ತು.
ಉಕ್ರೇನ್ ಮತ್ತು ರಷ್ಯಾ ಸಂಘರ್ಷ ತೀವ್ರಗೊಂಡಿದ್ದು, ಪೋಷಕರು ಸೈನಿಕೇಶ್ ಜೊತೆಗಿನ ಸಂಪರ್ಕ ಕಳೆದುಕೊಂಡಿದ್ದಾರೆ. ಹೀಗಾಗಿ, ಪೋಷಕರು ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಬಳಿಕ, ಅಧಿಕಾರಿಗಳು ವಿದ್ಯಾರ್ಥಿಯನ್ನು ಸಂಪರ್ಕಿಸಿದಾಗ, ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್’ನ ಪ್ಯಾರಾಮಿಲಿಟರಿ ಪಡೆ ಸೇರಿರುವುದಾಗಿ ಹೇಳಿದ್ದಾರೆ.
ಈ ಮಧ್ಯೆ, ಅಧಿಕಾರಿಗಳು ವಿದ್ಯಾರ್ಥಿಯ ಪೋಷಕರ ಬಳಿ ಮಾತನಾಡಿದಾಗ ಆತ ಭಾರತೀಯ ಸೇನೆ ಸೇರಲು ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತಗೊಂಡಿದ್ದ ಬಗ್ಗೆ ತಿಳಿದುಬಂದಿದೆ.