ಹಿಂದಿ ಹೇರಿಕೆ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ಸರ್ಕಾರ

Prasthutha|

ಚೆನ್ನೈ: ತಮಿಳುನಾಡು ಸರ್ಕಾರ ಹಿಂದಿ ಹೇರಿಕೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ ಮತ್ತು ಅಧಿಕೃತ ಭಾಷೆಯ ಕುರಿತು ಸಂಸದೀಯ ಸಮಿತಿಯ ವರದಿಯಲ್ಲಿ ಮಾಡಲಾದ ಶಿಫಾರಸುಗಳನ್ನು ಜಾರಿಗೊಳಿಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

- Advertisement -

ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮಂಡಿಸಿದ ನಿರ್ಣಯವನ್ನು ಸಚಿವ ಸಂಪುಟ ಸರ್ವಾನುಮತದಿಂದ ಅಂಗೀಕರಿಸಿದೆ.

ತಮಿಳುನಾಡಿನ ಮಾತೃಭಾಷೆಯಾದ ತಮಿಳನ್ನು ಸಂರಕ್ಷಿಸಲು, ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಇರಿಸಲು, ಎಲ್ಲಾ 22 ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇಧದಲ್ಲಿ ಇರಿಸಲು ಮತ್ತು ಹಿಂದಿ ಮಾತನಾಡದ ರಾಜ್ಯಗಳ ಜನರ ಹಕ್ಕುಗಳನ್ನು ರಕ್ಷಿಸಲು ಮತ್ತೊಮ್ಮೆ ಒತ್ತಾಯಿಸಲಾಗುತ್ತಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ತಮಿಳು ಭಾಷೆಯನ್ನು ರಕ್ಷಿಸಲು ಪ್ರಾಣತ್ಯಾಗ ಮಾಡಿದವರು ಅಥವಾ ಜೈಲಿಗೆ ಹೋದವರನ್ನು ನೆನೆಸಿಕೊಳ್ಳುವುದು ಸಕಾಲ ಎಂದು ಭಾವಿಸುತ್ತೇನೆ. ಭಾಷೆ ನಮ್ಮ ಜೀವನ, ನಮ್ಮ ಭಾವನೆ ಮತ್ತು ನಮ್ಮ ಭವಿಷ್ಯವಾಗಿದೆ ಎಂದು ತಿಳಿಸಿದರು.

ರಾಜ್ಯ ಭಾಷೆಗಳ ಬಗ್ಗೆ ಕಾಳಜಿ ವಹಿಸುತೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಕೇಂದ್ರ ಸರ್ಕಾರದ ಹೃದಯ ಮಾತ್ರ ಹಿಂದಿ ಭಾಷೆಗಾಗಿ ಮಿಡಿಯುತ್ತಿದೆ ಎಂದು ಅವರು ಟೀಕಿಸಿದರು.



Join Whatsapp