ಚೆನ್ನೈ: ಸಂಕ್ರಾಂತಿ ಪ್ರಯುಕ್ತ ತಮಿಳುನಾಡಿನಲ್ಲಿ ಗೂಳಿಗಳನ್ನು ಮಣಿಸಲಾಗುವ ಜಲ್ಲಿಕಟ್ಟು ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ಈ ಸಂಬಂಧ ವ್ಯಕ್ತಿಗಳಿಬ್ಬರು ಗೂಳಿಯೊಂದಕ್ಕೆ ಜೀವಂತ ಹುಂಜ ತಿನ್ನಿಸಿದ ಕೃತ್ಯ ನಡೆದಿದೆ. ಈ ವಿಕೃತಿ ಮೆರೆಯಲಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಇದನ್ನು ಪ್ರಸಾರ ಮಾಡಿದ ಯುಟ್ಯೂಬರ್ ವಿರುದ್ಧ FIR ದಾಖಲಿಸಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೀವಂತ ಹುಂಜವನ್ನು ಬಲವಂತವಾಗಿ ಗೂಳಿಗೆ ತಿನ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಸುಮಾರು 2 ನಿಮಿಷ ಇರುವ ಈ ವಿಡಿಯೋವನ್ನು ರಘು ಎಂಬಾತ ತನ್ನ ಯುಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಗೂಳಿ ಸಸ್ಯಾಹಾರಿ ಪ್ರಾಣಿಯಾಗಿದ್ದು, ಅದಕ್ಕೆ ಹುಂಜವನ್ನು ತಿನ್ನಿಸುವ ಮೂಲಕ ವಿಕೃತಿ ಮೆರೆಯಲಾಗಿದೆ. ಒಂದು ವೇಳೆ ಜಲ್ಲಿಕಟ್ಟು ಪಂದ್ಯಾವಳಿಯಲ್ಲಿ ಈ ಎತ್ತು ಗೆದ್ದರೆ ಇದನ್ನು ನೋಡಿಕೊಂಡು ಅನೇಕ ಮಾಲೀಕರು ಇದನ್ನೇ ಅನುಸರಿಸುತ್ತಾರೆ. ಪೊಲೀಸರು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರಾಣಿಪ್ರಿಯ ಅರುಣ್ಎಂಬವರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತಾರಮಂಗಲಂ ಪೊಲೀಸ್ ಠಾಣಾಧಿಕಾರಿ, ಘಟನೆ ಸಂಬಂಧ ಪ್ರಾಣಿಪ್ರಿಯರು ಹಾಗೂ ಹಲವರು ವೈರಲ್ ವಿಡಿಯೋ ಕುರಿತು ಆಕ್ಷೇಪವೆತ್ತಿದ ಬೆನ್ನಲ್ಲೇ FIR ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಯುಟ್ಯೂಬರ್ಗಾಗಿ ಶೋಧ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
Kicking rooster shoved down a herbivore’s throat. I can only imagine what havoc that’ll wreck to this poor animal’s system.
— Shreya 🇵🇸 (@ParopkariS) January 12, 2024
“Jallikattu ready” it seems.
It’s repulsive, it’s cruel and I’m hopeful that the @tnpoliceoffl will take cognizance pic.twitter.com/FlG5vTbJ7z