ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಝಡ್ ಶ್ರೇಣಿ ಭದ್ರತೆ

Prasthutha|

ನವದೆಹಲಿ:  ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಭದ್ರತೆಯನ್ನು ಹೆಚ್ಚಿಸಿರುವ ಗೃಹ ಸಚಿವಾಲಯವು ಝಡ್ ಶ್ರೇಣಿಯ ಭದ್ರತೆಯನ್ನು ನೀಡಿದೆ.

- Advertisement -

ಅಣ್ಣಾಮಲೈ ಅವರಿಗೆ ಈ ಹಿಂದೆ ವೈ ಕೆಟಗರಿ ಭದ್ರತೆಯಿದ್ದು ಝಡ್ ಶ್ರೇಣಿಗೆ ಭದ್ರತೆ ಹೆಚ್ಚಿಸಿರುವುದರಿಂದ ಸಿಆರ್’ಎಫ್’ನ ಒಟ್ಟು 33 ಕಮಾಂಡೋಗಳು ಅವರಿಗೆ  ಭದ್ರತೆಯನ್ನು ನೀಡಲಿದ್ದಾರೆ. ಅಣ್ಣಾಮಲೈ ಅವರಿಗೆ ಅಪಾಯ ಹೆಚ್ಚಾಗುವ ಆತಂಕದ ಹಿನ್ನೆಲೆಯಲ್ಲಿ ಅವರಿಗೆ ಈ ಭದ್ರತೆ ನೀಡಲಾಗಿದೆ.

ಮಾಜಿ ಐಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ತಮಿಳುನಾಡು ಬಿಜೆಪಿ ಅಧ್ಯಕ್ಷರಿಗೆ ಮಾವೋವಾದಿಗಳು ಮತ್ತು ಕೋಮುವಾದಿಗಳಿಂದ  ಬೆದರಿಕೆ ಹೆಚ್ಚುತ್ತಿದೆ ಎಂದು ಹೇಳಲಾಗಿದೆ.

- Advertisement -

ಈ ಕುರಿತು ಐಬಿ ವರದಿ ಬಂದ ನಂತರ ಅಣ್ಣಾಮಲೈ ಅವರಿಗೆ ಝಡ್ ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಐಬಿಯ ಈ ವರದಿಯ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯವು ಲೋಕಸಭಾ ಸದಸ್ಯ ಚಿರಾಗ್ ಪಾಸ್ವಾನ್’ಗೆ ಕೂಡ ಝಡ್ ಶ್ರೇಣಿಯ ವಿಐಪಿ ಭದ್ರತೆಯನ್ನು ನೀಡಿದೆ.

Join Whatsapp