ಡ್ರೈವಿಂಗ್ ಮಾಡಿಕೊಂಡು ತಲ್ವಾರ್ ಅಟ್ಯಾಕ್ ಹೇಳಿಕೆ; ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಸಖತ್ ಟ್ರೋಲ್ ಮಾಡುತ್ತಿರುವ ನೆಟ್ಟಿಗರು

Prasthutha|

►ಡ್ರೈವಿಂಗ್ ಮಾಡಿಕೊಂಡೇ ತಲ್ವಾರು ಬೀಸಿದ ಆ ಹೀರೋ ಯಾರು ಎಂಬ ಪ್ರಶ್ನೆ

- Advertisement -

ಮಂಗಳೂರು: ಡ್ರೈವಿಂಗ್ ಮಾಡಿಕೊಂಡೇ ನನ್ನ ಮೇಲೆ ತಲ್ವಾರು ದಾಳಿ ಮಾಡಲು ಯತ್ನಿಸಿದ್ದಾನೆ ಎಂಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಹೇಳಿಕೆ ಇದೀಗ ವ್ಯಾಪಕ ಟ್ರೋಲ್ ಗೆ ಒಳಗಾಗುತ್ತಿದ್ದು, ಶಾರೂಕ್ ಖಾನ್ ನಟನೆಯ ಚೆನ್ನೈ ಎಕ್ಸ್ ಪ್ರೆಸ್ ಚಲನಚಿತ್ರದ ಸೀನ್ ಒಂದನ್ನು ಹಂಚಿಕೊಂಡು ನೆಟ್ಟಿಗರು ಶಾಸಕರನ್ನು ವ್ಯಂಗ್ಯ ಮಾಡುತ್ತಿದ್ದಾರೆ.

ಕಾರ್ ಓವರ್ ಟೇಕ್ ಪ್ರಕರಣದಲ್ಲಿ ಹರೀಶ್ ಪೂಂಜಾ, ನಿನ್ನೆ ರಾತ್ರಿ ಬೆಂಗಳೂರಿನಿಂದ ಬಂದು ಬೆಳ್ತಂಗಡಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ರಾತ್ರಿ ಸುಮಾರು 11 ಗಂಟೆ ವೇಳೆಗೆ ದಾಳಿ ಸಂದರ್ಭದಲ್ಲಿ ನಾನು ನನ್ನ ಸ್ನೇಹಿತನ ಕಾರಿನಲ್ಲಿದ್ದೆ. ದಾಳಿ ನಡೆಸಲು ಬಂದಿದ್ದ ಆರೋಪಿಗಳು ಮೊದಲು ನನ್ನ ಇನ್ನೋವಾ ಕಾರಿನ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಆ ಕಾರಿನಲ್ಲಿ ನಾನು ಇಲ್ಲದ ಕಾರಣ ಮತ್ತೆ ನಾನಿದ್ದ ಹುಂಡೈ ಐ-20 ಕಾರಿನ ಮೇಲೆ ದಾಳಿ ನಡೆಸಿದ್ದಾನೆ” ಎಂದು ಹೇಳಿದ್ದರು.
ಇಷ್ಟಕ್ಕೇ ಮುಗಿಸದ ಶಾಸಕರು, ಇದರ ಹಿಂದೆ ಜಿಹಾದಿ ಶಕ್ತಿಗಳಿರುವ ಬಗ್ಗೆ ಅನುಮಾನ ಇದೆ. ನಾನು ಹಿಂದುತ್ವದ ಪರವಾಗಿ ಕೆಲಸ ಮಾಡುವ ಶಾಸಕ. ಇದಕ್ಕೆ ನನ್ನ ಮೇಲೆ ಜಿಹಾದಿ ಶಕ್ತಿಗಳು ಹಗೆ ಸಾಧಿಸುವ ಸಾಧ್ಯತೆ ಇದೆ. ಆದರೆ ಇದಕ್ಕೆ ನಾವು ಹೆದರಲ್ಲ. ಹಿಂದುತ್ವದ ವಿಚಾರದಲ್ಲಿ ರಾಜಿಯಾಗಲ್ಲ. ‘ಡ್ರೈವಿಂಗ್ ಮಾಡಿಕೊಂಡೇ ತಲವಾರು ದಾಳಿ ನಡೆಸಲು ಯತ್ನಿಸಲಾಗಿದೆ’ ಎಂದು ಹೇಳಿಕೆ ನೀಡಿದ್ದರು.

- Advertisement -

ಆದರೆ ಮರುದಿನ ಬೆಳಗ್ಗೆ ದಕ್ಷಿಣ ಕನ್ನಡ ಎಸ್ ಪಿ ಯವರು ಶಾಸಕರ ಮೇಲೆ ತಲ್ವಾರು ದಾಳಿ ಎಂಬುವುದು ಸುಳ್ಳುಸುದ್ದಿ. ಇದೊಂದು ಓವರ್ ಟೇಕ್ ಕೇಸ್ ಅಷ್ಟೇ. ಬಂಧಿತನ ವಾಹನದಿಂದ ಯಾವುದೇ ರೀತಿಯ ಆಯುಧಗಳು ನಮಗೆ ಲಭ್ಯವಾಗಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿದ್ದಂತೆಯೇ ಸಾಮಾಜಿಕ ವಲಯಗಳಲ್ಲಿ ಶಾಸಕರ ಹೇಳಿಕೆಯನ್ನು ಅಪಹಾಸ್ಯ ಮಾಡುವಂತಹ ಟ್ರೋಲ್ ಮತ್ತು ಮೀಮ್ಸ್ ಗಳು ಹರಿದಾಡ ತೊಡಗಿವೆ.

ಶಾರುಖ್ ಖಾನ್-ದೀಪಿಕಾ ಅಭಿನಯದ ಬಾಲಿವುಡ್ ಸಿನಿಮಾ ‘ಚೆನ್ನೈ ಎಕ್ಸ್ಪ್ರೆಸ್’ನ ಸಿನಿಮಾ ದೃಶ್ಯವೊಂದನ್ನು ಬಳಸಿ, ಹಿಂಬದಿಯಲ್ಲಿ ಹರೀಶ್ ಪೂಂಜಾರವರ ವಾಯ್ಸ್ ಹಾಕಿ ಈ ರೀತಿಯಲ್ಲಿ ದಾಳಿ ನಡೆದದ್ದೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದೀಗ ಹರೀಶ್ ಪೂಂಜಾರ ಟ್ರೋಲ್ ವೀಡಿಯೋ ವಾಟ್ಸಪ್, ಟ್ವಿಟರ್, ಫೇಸ್ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

Join Whatsapp