ಉಕ್ರೇನ್ ಬಗ್ಗೆ ನಮಗೆ ಮಾತನಾಡಬಹುದಾದರೆ, ನಾವು ಪ್ಯಾಲೆಸ್ತೀನ್ ಬಗ್ಗೆಯೂ ಮಾತನಾಡಬಹುದು: ಅಲಿ ಫರಾಗ್

Prasthutha|

ಲಂಡನ್: “ಕ್ರೀಡೆಯಲ್ಲಿ ಎಂದಿಗೂ ರಾಜಕೀಯ ವಿಚಾರಗಳನ್ನು ಮಾತನಾಡಲು ಅವಕಾಶವಿರಲಿಲ್ಲ. ಆದರೆ ಈಗ ಏಕಾಏಕಿ ಆ ಅವಕಾಶವನ್ನು ನೀಡಲಾಗಿದೆ. ನಮಗೆ ಉಕ್ರೇನ್ ಬಗ್ಗೆ ಮಾತನಾಡುವ ಅವಕಾಶ ಇದೆ ಎನ್ನುವುದಾದರೆ, ಪ್ಯಾಲೆಸ್ತೀನ್ ಬಗ್ಗೆಯೂ ನಾವು ಮಾತನಾಡಬಹುದಾಗಿದೆ” ಎಂದು ವಿಶ್ವದ ನಂಬರ್ 1 ಸ್ಕ್ವಾಷ್ ಆಟಗಾರ ಅಲಿ ಫರಾಗ್ ಹೇಳಿದ್ದಾರೆ.

- Advertisement -

ಶನಿವಾರ ಮುಕ್ತಾಯವಾದ Optasia Championship ಪಂದ್ಯಕೂಟದಲ್ಲಿ ಪ್ರಶಸ್ತಿ ಗೆದ್ದ ಬಳಿಕ ಈಜಿಪ್ಟ್ ದೇಶದ ಆಟಗಾರ ಅಲಿ ಫರಾಗ್ ತನ್ನ ವಿಜಯೀ ಭಾಷಣದಲ್ಲಿ ಪ್ಯಾಲೆಸ್ತೀನ್ ಪರ ಧ್ವನಿ ಎತ್ತಿದರು. ಜೊತೆಗೆ ಪಾಶ್ಚಿಮಾತ್ಯ ಮಾಧ್ಯಮಗಳ ತಾರತಮ್ಯದ ಬಗ್ಗೆಯೂ ಪ್ರಶ್ನಿಸಿದರು.

“ನನ್ನ ಪ್ರಕಾರ ಪ್ಯಾಲೆಸ್ತೀನ್ ಕೂಡಾ ಕಳೆದ 74 ವರುಷಗಳಿಂದ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಆದರೆ ಪಾಶ್ಚಿಮಾತ್ಯ ಮಾಧ್ಯಮಗಳು ಅಲ್ಲಿ ನಡೆಯುತ್ತಿರುವ ದಬ್ಬಾಳಿಕೆ ಬಗ್ಗೆ ಮಾತನಾಡುತ್ತಿಲ್ಲ. ಕಾರಣ, ಪಾಶ್ಚಿಮಾತ್ಯ ಮಾಧ್ಯಮಗಳಿಗೆ ಪ್ಯಾಲೆಸ್ತೀನ್ ನಲ್ಲಾಗುತ್ತಿರುವ ದಬ್ಬಾಳಿಕೆ ಬಗ್ಗೆ ವರದಿ ಮಾಡಲು ಸರಿ ಹೊಂದುತ್ತಿಲ್ಲ” ಎಂದು ತಿಳಿಸಿದ್ದಾರೆ.

Join Whatsapp