ತಾಲಿಬಾನ್ ಸರಕಾರ ರಚನೆಗೆ ಕ್ಷಣಗಣನೆ: ಆತಿಥ್ಯ ವಹಿಸಲು ಆರು ದೇಶಗಳಿಗೆ ಆಹ್ವಾನ

Prasthutha|

ಕಾಬೂಲ್: ಇತ್ತೀಚೆಗೆ ನಡೆದ ಮಹತ್ವ ಬೆಳವಣಿಗೆಯಲ್ಲಿ ಅಫ್ಘಾನಿಸ್ತಾನದ ಮೇಲೆ ಹತೋಟಿ ಸಾಧಿಸಿರುವ ತಾಲಿಬಾನಿಗರು ಹೊಸ ಸರಕಾರ ರಚನೆಯ ವೇಳೆ ಹಾಜರಿರುವಂತೆ ಆರು ದೇಶಗಳಿಗೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.

ಚೀನಾ, ರಷ್ಯಾ, ಟರ್ಕಿ, ಇರಾನ್, ಪಾಕಿಸ್ತಾನ, ಕತಾರ್ ರಾಷ್ಟ್ರಗಳಿಗೆ ಆತಿಥ್ಯ ವಹಿಸುವಂತೆ ಆಹ್ವಾನ ನೀಡಲಾಗಿದೆ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ.

- Advertisement -

2001 ರಲ್ಲಿ ತಾಲಿಬಾನ್ ಸರ್ಕಾರವನ್ನು ಪತನಗೊಳಿಸಿ ಅಮೆರಿಕ ಮತ್ತು ಮಿತ್ರಗಳು ಅಫ್ಘಾನಿಸ್ತಾನದಲ್ಲಿ ಸುಮಾರು 20 ವರ್ಷಗಳ ಕಾಲ ನೆಲೆಸಿತ್ತು. ಪ್ರಸಕ್ತ ಎರಡು ದಶಕಗಳ ಬಳಿಕ ಮತ್ತೆ ಅಫಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ರಚನೆ ಆಗುತ್ತಿದೆ.

ಇತ್ತೀಚೆಗಷ್ಟೇ ಭಾರತ ಮತ್ತು ತಾಲಿಬಾನ್ ನಡುವೆ ಔಪಚಾರಿಕ ಮಾತುಕತೆ ನಡೆದಿದ್ದರೂ ಭಾರತವನ್ನು ಸರ್ಕಾರ ರಚನೆಯ ಸಮಾರಂಭಕ್ಕೆ ಆಹ್ವಾನಿಸಿಲ್ಲ.

- Advertisement -