ಕಾಬೂಲ್ : ಅಫ್ಘಾನಿಸ್ತಾನದ ಪ್ರಮುಖ ನಗರವಾದ ಕಂದಹಾರ್ ನ ಲಷ್ಕರ್ ಗಾಹ್ ಪಟ್ಟಣವನ್ನು ತಾಲಿಬಾನ್ ಬಂಡುಕೋರರು ವಶಪಡಿಸಿಕೊಂಡಿದ್ದಾರೆಂದು ಅಫ್ಘಾನ್ ನ ಭದ್ರತಾ ಮೂಲಗಳು ಶುಕ್ರವಾರ ದೃಢಪಡಿಸಿದೆ. ಅಫ್ಘಾನಿಸ್ತಾನದ ಮಿಲಿಟರಿ ಮತ್ತು ಸರ್ಕಾರಿ ಅಧಿಕಾರಿಗಳು ತಾಲಿಬಾನ್ ಬಂಡುಕೋರರೊಂದಿಗೆ ನಡೆಸಿದ ಒಪ್ಪಂದದ ಹಿನ್ನೆಲೆಯಲ್ಲಿ ನಗರವನ್ನು ಸ್ಥಳಾಂತರಿಸಲಾಗಿದೆಯೆಂದು ಭದ್ರತಾ ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ಎರಡನೇ ಮಹಾನಗರವಾದ ಕಂದಹಾರನ್ನು ವಶಪಡಿಸಲಾಗಿದೆಯೆಂದು ತಾಲಿಬಾನ್ ಶುಕ್ರವಾರ ಘೋಷಿಸಿದೆ. ಈ ಮೂಲಕ ಅಫ್ಘಾನ್ ಸರ್ಕಾರಕ್ಕೆ ಭಾರೀ ಹೊಡೆತ ನೀಡಿದೆಯೆಂದು ಹೇಳಲಾಗುತ್ತಿದೆ. ಕಂದಹಾರನ್ನು ಸಂಪೂರ್ಣವಾಗಿ ವಶಪಡಿಸಿರುವ ಕುರಿತು ತನ್ನ ಅಧಿಕೃತ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವ ತಾಲಿಬಾನ್ ಬಂಡುಕೋರರು, ಮುಜಾಹಿದ್ದೀನ್ ಗಳು ನಗರದ ಹುತಾತ್ಮರ ಸರ್ಕಲನ್ನು ಪ್ರವೇಶಿಸಿದ್ದಾರೆಂದು ತಿಳಿಸಿದೆ. ತಾಲಿಬಾನ್ ಬಂಡುಕೋರರ ಈ ನಡೆಯೊಂದಿಗೆ ಅಫ್ಘಾನ್ ಸರ್ಕಾರಿ ಅಧಿಕಾರಿಗಳು ಕಂದಹಾರ್ ನಗರದಿಂದ ಮಿಲಿಟರಿಯನ್ನು ಹಿಂಪಡೆದುಕೊಂಡಿದೆ.
ತಾಲಿಬಾನ್ ಬಂಡುಕೋರರು ಕಂದಹಾರನ್ನು ವಶಪಡಿಸಿಕೊಳ್ಳುವುದರೊಂದಿಗೆ ಸರ್ಕಾರ ಅಫ್ಘಾನಿಸ್ತಾನದ ಮೇಲಿನ ನಿಯಂತ್ರಣವನ್ನು ಬಹುಪಾಲು ಕಳೆದು ಕೊಂಡಂತಾಗಿದೆ. ಅಫ್ಘಾನ್ ಪಡೆ ಮತ್ತು ತಾಲಿಬಾನ್ ಬಂಡುಕೋರರ ನಡುವೆ ಕಳದೆ 8 ದಿನಗಳಿಂದ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮವಾಗಿ ಶುಕ್ರವಾರ ಕಂದಹಾರವನ್ನು ತಾಲಿಬಾನ್ ವಶಪಡಿಸಿದೆ.
ಅಮೇರಿಕಾ ಮತ್ತು ಮಿತ್ರರಾಷ್ಟ್ರಗಳು ಅಫ್ಘಾನಿಸ್ತಾನದಿಂದ ತನ್ನ ಪಡೆಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ತಾಲಿಬಾನ್ ಬಂಡುಕೋರರು ತನ್ನ ಆಕ್ರಮಣವನ್ನು ಪ್ರಾರಂಭಿಸಿದೆ. ಇದರೊಂದಿಗೆ ಅಫ್ಘಾನ್ ರಾಷ್ಟ್ರದ ವಿರುದ್ಧ ಎರಡು ದಶಕಗಳಿಂದ ನಡೆಯುತ್ತಿರುವ ಯುದ್ದವನ್ನು ಸಪ್ಟೆಂಬರ್ 11 ರಂದು ಕೊನೆಗೊಳಿಸಲಿದೆಯೆಂದು ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ