ಮಂಗಳೂರು: ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮುಖದ ಮೇಲೆ ವಿಧೇಯಕಗಳ ಪ್ರತಿಗಳನ್ನು ಹರಿದು ಬಿಸಾಡಿದ ಶಾಸಕರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಜರುಗಿಸಿ ಧಮ್ಮು, ತಾಕತ್ತು ತೋರಿಸಿ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಧಮ್ಮು,ತಾಕತ್ತಿರುವ ಬೊಮ್ಮಯಿ ಪಡೆ, ದಲಿತ ಉಪಸ್ಪೀಕರ್ ಮೇಲೆ ಕಾಗದ ಹರಿದು ಬಿಸಾಕಿದೆ. ಆಶಿಸ್ತು ತೋರಿದವರನ್ನು ಹೊರಹಾಕುವಂತೆ ಅವರು ಆದೇಶ ಮಾಡಿದರೂ ಮಾರ್ಷಲ್ ಗಳು ಧಮ್ಮು,ತಾಕತ್ತು ತೋರಿಸದೆ ಸುಮ್ಮನಾಗಿದ್ದಾರೆ. ಅಮಾನತಿಗೆ ಮಾತ್ರ ಸೀಮಿತಗೊಳಿಸದೆ ಅವರ ಮೇಲೆ ಇನ್ನಷ್ಟು ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಸರಕಾರ ಧಮ್ಮು, ತಾಕತ್ತು ತೋರಿಸಬೇಕಿದೆ ಎಂದು ಸವಾಲು ಹಾಕಿದ್ದಾರೆ.