ಹಾವೇರಿ: ನಿರಂತರ ಮಳೆಯಾಗುತ್ತಿರುವುದರಿಂದ ತಹಶೀಲ್ದಾರ್ ಕಚೇರಿಯ ಮೇಲ್ಛಾವಣಿ ಸೋರಿಕೆಯಾಗುತ್ತಿದ್ದು, ಕಚೇರಿ ಸಿಬ್ಬಂದಿ ಮಳೆಯ ನೀರಿನಿಂದ ರಕ್ಷಣೆಗೆ ಛತ್ರಿ ಹಿಡಿದು ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿಯುಂಟಾಗಿದೆ.
2 ನೇ ಮಹಡಿಯಿಂದ ನೆಲ ಮಹಡಿವರೆಗೂ ಕಟ್ಟಡ ಸೋರಿಕೆಯಾಗುತ್ತಿದ್ದು, ಮಹತ್ವ ದಾಖಲೆಗಳು ಹಾಗೂ ಕಂಪ್ಯೂಟರ್ ಗಳ ರಕ್ಷಣೆಗೆ ಕಚೇರಿ ಸಿಬ್ಬಂದಿ ಹರಸಾಹಸಪಡಬೇಕಾಗಿದೆ.
ಮಳೆ ನೀರು ಸೋರಿಕೆಯಿಂದ ಆದಾಯ, ಜಾತಿ, ಆಸ್ತಿ ಪತ್ರಗಳು ಹಾಗೂ ಕಚೇರಿ ಪ್ರತಿಗಳು ಒದ್ದೆಯಾಗಿದ್ದು, ಸಿಬ್ಬಂದಿ ಅವುಗಳನ್ನು ಒಣಗಿಸಲು ಹಾಕುತ್ತಿದ್ದಾರೆ. ಹದಿನೈದು ವರ್ಷಗಳ ಹಿಂದೆ ಕಳಪೆ ಕಾಮಗಾರಿ ಹಾಗೂ ಅವೈಜ್ಞಾನಿಕವಾಗಿ ಸೋಲಾರ್ ಪೆನಲ್ ಅಳವಡಿಸಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಈ ಕಟ್ಟಡ ಸೋರುತ್ತಿದೆ. ಪ್ರತಿ ವರ್ಷ ಸೋರುತ್ತಿದ್ದರೂ ಇದಕ್ಕೆ ಮುಕ್ತಿ ಕೊಡಲು ಯಾರೊಬ್ಬರೂ ಮುಂದಾಗಿಲ್ಲ ಎಂದು ಹಲವರು ದೂರಿದ್ದಾರೆ.