ಹುಬ್ಬಳ್ಳಿಯ ತಹ್ಸೀನ್ ಬಾನು ದವಡಿಗೆ ಯುಪಿಎಸ್ಸಿ ಯಲ್ಲಿ 482ನೇ ರ್‍ಯಾಂಕ್

Prasthutha|

ಹುಬ್ಬಳ್ಳಿ: ಕೇಂದ್ರ ಲೋಕಸಭಾ ಆಯೋಗದ (ಯುಪಿಎಸ್ ಸಿ) 2021ನೇ ಸಾಲಿನ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ, ಹುಬ್ಬಳ್ಳಿಯ ತಹ್ಸೀನ್ ಬಾನು ದವಡಿ ಮೊದಲ ಪ್ರಯತ್ನದಲ್ಲೇ 482ನೇ ರ್‍ಯಾಂಕ್ ಪಡೆದಿದ್ದಾರೆ. ತಹ್ಸೀನ್ ಬಾನು ಖಾದರ್ ಬಾಷಾ ಹಾಗೂ ಹಸೀನ ಬೇಗಂ ದಂಪತಿಯ ಪುತ್ರಿಯಾಗಿದ್ದಾಳೆ.

- Advertisement -

ಹುಬ್ಬಳ್ಳಿ ನಗರದ ನಿವಾಸಿಯಾಗಿರುವ ತಹ್ಸೀನ್ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಮ್ ಯುವತಿಯಾಗಿದ್ದು, ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.

Join Whatsapp