ಮಹಿಳೆಯನ್ನು ಕೊಂದ ಆರೋಪ: ಟಗರಿಗೆ 3 ವರ್ಷ ಜೈಲು ಶಿಕ್ಷೆ

Prasthutha|

ಮಹಿಳೆಯನ್ನು ಕೊಂದ ಆರೋಪದಡಿ ಟಗರೊಂದಕ್ಕೆ 3 ವರ್ಷ ಜೈಲು ಶಿಕ್ಷೆ ವಿಧಿಸಿರುವ  ವಿಚಿತ್ರ ಪ್ರಕರಣವೊಂದು ದಕ್ಷಿಣ ಸುಡಾನ್‌ನಲ್ಲಿ ನಡೆದಿದೆ

- Advertisement -

ಮೇ ತಿಂಗಳ ಮೊದಲ ವಾರದಲ್ಲಿ  ದಕ್ಷಿಣ ಸುಡಾನ್ ನ ಅಕುಯೆಲ್ ಯೋಲ್ ಎಂಬಲ್ಲಿ  45 ವರ್ಷದ ಅಧಿಯು ಚಾಪಿಂಗ್ ಎಂಬ ಮಹಿಳೆ ಮೇಲೆ ಟಗರು ದಾಳಿ ನಡೆಸಿದೆ. ಟಗರಿನ ಬಲವಾದ ಹೊಡೆತಕ್ಕೆ ಮಹಿಳೆ ಸಾವನ್ನಪ್ಪಿದ್ಧಾರೆ. ನಂತರ ಟಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಟಗರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಸುಡಾನ್ ನ ಲೇಕ್ ಸ್ಟೇಟ್ ನ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯ ಮಿಲಿಟರಿ ಕ್ಯಾಂಪ್ ನಲ್ಲಿ ಟಗರು ಮೂರು ವರ್ಷಗಳ ಕಾಲ ಕಳೆಯಬೇಕಾಗಿದೆ.

ಅಷ್ಟೇ ಅಲ್ಲ, ಟಗರು ಮಾಲೀಕ ಡುಯೋನಿ ಮಾನ್ಯಂಗ್ ಧಾಲ್ ಕೂಡಾ ಐದು ಹಸುಗಳನ್ನು ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಹಸ್ತಾಂತರಿಸಬೇಕೆಂದೂ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ. ಸೂಡಾನ್ ನ ಸಾಂಪ್ರದಾಯಿಕ ಕಾನೂನು ಪ್ರಕಾರ ಯಾವುದೇ ದೇಶೀಯ ಪ್ರಾಣಿ ಯಾವುದೇ ವ್ಯಕ್ತಿಯನ್ನು ಕೊಂದಲ್ಲಿ ಆ ಪ್ರಾಣಿಗೂ ಶಿಕ್ಷೆ ಕೊಡಲಾಗುತ್ತದೆ. ಅಲ್ಲದೆ, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಕೊಡಬೇಕಾಗಿದೆ.

Join Whatsapp