ತಬ್ಲಿಗಿ ಜಮಾತ್ ಪ್ರಕರಣ | ಏಳು ವಿದೇಶಿಯರು ಸೇರಿದಂತೆ 17 ಮಂದಿ ದೋಷಮುಕ್ತ

Prasthutha|

ಲಖನೌ : ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಏಳು ವಿದೇಶಿಯರೂ ಸೇರಿದಂತೆ 17 ಜನರನ್ನು ಸ್ಥಳೀಯ ನ್ಯಾಯಾಲಯವು ದೋಷಮುಕ್ತಗೊಳಿಸಿದೆ.

- Advertisement -

ಕೊರೊನ ವೈರಸ್ ಸೋಂಕಿನ ಆರಂಭದಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿಯಮಗಳನ್ನು ಮೀರಿ ತಬ್ಲೀಗಿ ಜಮಾತ್ ಸಮಾವೇಶದಲ್ಲಿ ಭಾಗಿಯಾಗಿದ್ದು, ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ಆದರೆ, ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿರುವ ಕಾರಣ ಪ್ರಕರಣಕ್ಕೆ ಸಂಬಂಧಿಸಿ ಎಲ್ಲರನ್ನೂ ದೋಷಮುಕ್ತಗೊಳಿಸಿ ಇಲ್ಲಿನ ಸಿಜೆಎಂ ನ್ಯಾಯಾಲಯ ಆದೇಶ ನೀಡಿದೆ.

ದೋಷಮುಕ್ತರಾದವರಲ್ಲಿ ಏಳು ಮಂದಿ ಇಂಡೋನೇಷ್ಯಾ ಪ್ರಜೆಗಳಾಗಿದ್ದು, ಉಳಿದವರು ಭಾರತೀಯರಾಗಿದ್ದಾರೆ. ಕೊರೊನ ಲಾಕ್ ಡೌನ್ ವೇಳೆ, ಸೋಂಕಿನ ಸಂಕಷ್ಟದಲ್ಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದ ಮುಖ್ಯವಾಹಿನಿ ಮಾಧ್ಯಮಗಳು ಈ ಕುರಿತಂತೆ ತಮ್ಮ ಮುಸ್ಲಿಂ ವಿರೋಧಿ ಅಜೆಂಡಾವನ್ನು ಬಹಿರಂಗವಾಗಿಯೇ ಪ್ರದರ್ಶಿಸಿದ್ದವು. ಈ ವರದಿಗಳನ್ನಾಧರಿಸಿ ದಾಖಲಾಗಿದ್ದ ವಿವಿಧ ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗಿದ್ದಾರೆ. ಕೆಲವು ನ್ಯಾಯಾಲಯಗಳಲ್ಲಿ ಮಾಧ್ಯಮಗಳು ಈ ವೇಳೆ ತೋರಿದ ದುರ್ನಡತೆ ಬಗ್ಗೆ ಈಗಾಗಲೇ ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿದೆ.

Join Whatsapp